Sunday, May 19, 2024
Homeತಾಜಾ ಸುದ್ದಿಕೇರಳದಲ್ಲಿ ಮಂಕಿಪಾಕ್ಸ್ ಸೋಂಕಿನ ಎರಡನೇ ಪ್ರಕರಣ ಪತ್ತೆ: ತೀವ್ರ ನಿಗಾ

ಕೇರಳದಲ್ಲಿ ಮಂಕಿಪಾಕ್ಸ್ ಸೋಂಕಿನ ಎರಡನೇ ಪ್ರಕರಣ ಪತ್ತೆ: ತೀವ್ರ ನಿಗಾ

spot_img
- Advertisement -
- Advertisement -

ತಿರುವನಂತಪುರಂ: ಯುರೋಪ್ ಸೇರಿದಂತೆ ಜಗತ್ತಿನ ಹಲವೆಡೆ ಸುದ್ದಿಯಾಗುತ್ತಿರುವ ಮಂಕಿಪಾಕ್ಸ್ ಸೋಂಕಿನ ಎರಡನೇ ಪ್ರಕರಣ ಕೇರಳದಲ್ಲಿ ಪತ್ತೆಯಾಗಿದೆ ಎಂದು ಸೋಮವಾರ ವರದಿ ತಿಳಿಸಿದೆ.

ಇತ್ತೀಚೆಗಷ್ಟೇ ವಿದೇಶದಿಂದ ಕೇರಳಕ್ಕೆ ಆಗಮಿಸಿದ್ದ 31 ವರ್ಷದ ವ್ಯಕ್ತಿಯಲ್ಲಿ ವ್ಯಕ್ತಿಯಲ್ಲಿ ಮಂಕಿಪಾಕ್ಸ್ ಸೋಂಕಿನ ಲಕ್ಷಣ ಕಂಡುಬಂದಿದ್ದು, ಆಸ್ಪತ್ರೆಗೆ ದಾಖಲಾಗಿರುವುದಾಗಿ ಆರೋಗ್ಯ ಸಚಿವೆ ವೀಣಾ ಜಾರ್ಜ್ ತಿಳಿಸಿದ್ದಾರೆ.

ಜುಲೈ 13 ರಂದು ಕೇರಳಕ್ಕೆ ಆಗಮಿಸಿದ ರೋಗಿಯು ಕಣ್ಣೂರು ಮೂಲದವರಾಗಿದ್ದು, ಅಲ್ಲಿನ ಪರಿಯಾರಂ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಸಚಿವೆ ವೀಣಾ ಜಾರ್ಜ್ ತಿಳಿಸಿದ್ದಾರೆ. ರೋಗಿಯೊಂದಿಗೆ ನಿಕಟ ಸಂಪರ್ಕದಲ್ಲಿದ್ದ ಎಲ್ಲರನ್ನೂ ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ ಎಂದು ಸಚಿವರು ಹೇಳಿದ್ದಾರೆ.

- Advertisement -
spot_img

Latest News

error: Content is protected !!