Saturday, June 6, 2026
Homeಕರಾವಳಿಪುತ್ತೂರು:ಬೆಟ್ಟಂಪಾಡಿಯಲ್ಲಿ ಸರಗಳ್ಳರನ್ನು ಹಿಡಿದ ಸಾರ್ವಜನಿಕರು

ಪುತ್ತೂರು:ಬೆಟ್ಟಂಪಾಡಿಯಲ್ಲಿ ಸರಗಳ್ಳರನ್ನು ಹಿಡಿದ ಸಾರ್ವಜನಿಕರು

- Advertisement -
- Advertisement -

ಪುತ್ತೂರು: ಕೆಲವು ದಿನಗಳ ಹಿಂದೆ ಬೆಟ್ಟಂಪಾಡಿಯಲ್ಲಿ ಸರಗಳ್ಳತನ ಮಾಡಿದ್ದ ಖದೀಮರನ್ನು ಇಂದು ಸ್ಥಳೀಯರು ಹಿಡಿದಿರುವ ಘಟನೆ ಪುತ್ತೂರು ತಾಲೂಕಿನ ಬೆಟ್ಟಂಪಾಡಿಯ ರೆಂಜದಲ್ಲಿ ನಡೆದಿದೆ.

ಕೆಲವು ದಿನಗಳ ಹಿಂಗೆ ಬೆಟ್ಟಂಪಾಡಿಯಲ್ಲಿ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯ ಕತ್ತಿನಿಂದ ಚಿನ್ನದ ಕರಿಮಣಿ ಸರವನ್ನು ಎಗರಿಸಿ ಬೈಕಿನಲ್ಲಿ ಕಳ್ಳರು ಪರಾರಿಯಾಗಿದ್ದರು. ಇದೇ ಯುವಕರು ಇಂದು ಬೆಟ್ಟಂಪಾಡಿಗೆ ಬರುವುದನ್ನು ಕಂಡ ಸ್ಥಳೀಯರು ಅವರ ಚಲನವಲನದ ಮೇಲೆ ಕಣ್ಣಿಟ್ಟಿದ್ದರು. ಬೆಳಿಗ್ಗೆ ಸುಮಾರು 11 ಗಂಟೆಯ ವೇಳೆಗೆ ಸಂಟ್ಯಾರ್ ಮೂಲಕ ಬೆಟ್ಟಂಪಾಡಿಗೆ ಬೈಕಿನಲ್ಲಿ ಇಬ್ಬರು ತೆರಳುತ್ತಿದ್ದರು. ಇದನ್ನು ನೋಡಿದ ಸ್ಥಳೀಯರು ಗುಪ್ತವಾಗಿ ಮಾಹಿತಿ ನೀಡಿ ಆಯಕಟ್ಟಿನ ಸ್ಥಳದಲ್ಲಿ ಯುವಕರನ್ನು ನಿಲ್ಲಿಸಿದ್ದರು.

ಸ್ಥಳೀಯ ರಿಕ್ಷಾ ಚಾಲಕರು , ವಾಹನ ಚಾಲಕರು ಸಾರ್ವಜನಿಕರು ಹೊಂಚು ಹಾಕುತ್ತಿರುವಾಗಲೇ ಆರೋಪಿಗಳು ರೆಂಜದಲ್ಲಿ ಸಿಕ್ಕಿ ಬಿದ್ದಿದ್ದಾರೆ. ಇಬ್ಬರನ್ನು ಬಳಿಕ ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ. ಇಬ್ಬರೂ ಕಾಸರಗೋಡು ನಿವಾಸಿಗಳು ಎನ್ನಲಾಗಿದೆ.

- Advertisement -

Latest News

error: Content is protected !!