Saturday, May 18, 2024
Homeತಾಜಾ ಸುದ್ದಿಕಾರುಗಳಲ್ಲಿ ಪ್ರಯಾಣಿಸುವ ಪ್ರತಿಯೊಬ್ಬರು ಸೀಟ್ ಬೆಲ್ಟ್ ಧರಿಸುವುದು ಕಡ್ಡಾಯ; ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್​...

ಕಾರುಗಳಲ್ಲಿ ಪ್ರಯಾಣಿಸುವ ಪ್ರತಿಯೊಬ್ಬರು ಸೀಟ್ ಬೆಲ್ಟ್ ಧರಿಸುವುದು ಕಡ್ಡಾಯ; ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್​ ಗಡ್ಕರಿ ಹೇಳಿಕೆ

spot_img
- Advertisement -
- Advertisement -

ನವದೆಹಲಿ; ಕಾರುಗಳಲ್ಲಿ ಪ್ರಯಾಣಿಸುವ ಪ್ರತಿಯೊಬ್ಬರು ಸೀಟ್ ಬೆಲ್ಟ್ ಧರಿಸುವುದು ಕಡ್ಡಾಯ, ಇಲ್ಲದೇ ಇದ್ದರೆ ದಂಡ ತೆರಬೇಕಾಗಬಹುದು ಎಂದು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್​ ಗಡ್ಕರಿ ಹೇಳಿದ್ದಾರೆ. ಮುಂದಿನ ಮೂರು ದಿನಗಳಲ್ಲಿ ಅಧಿಸೂಚನೆ ಪ್ರಕಟಿಸಲಾಗುತ್ತದೆ ಎಂದಿದ್ದಾರೆ.

ಕಾರಿನ ಹಿಂಭಾಗದಲ್ಲಿ ಸೀಟ್​ ಬೆಲ್ಟ್​ಗಳನ್ನು ಬಳಸುವ ಅಗತ್ಯತೆಯ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೇಂದ್ರ ರಸ್ತೆ ಸಾರಿಗೆ ಸಚಿವಾಲಯವು ಕ್ರಿಕೆಟಿಗರು ಮತ್ತು ಬಾಲಿವುಡ್​ ನಟರನ್ನು ಸಹ ಬಳಸಿಕೊಳ್ಳಲಿದೆ.

ಭಾನುವಾರ ಮುಂಬೈ- ಅಹಮದಾಬಾದ್​ ಹೆದ್ದಾರಿಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ನಿಧನರಾದ ಟಾಟಾ ಸನ್ಸ್​ ಮಾಜಿ ಅಧ್ಯಕ್ಷ ಸೈರಸ್​ ಕಾರಿನ ಹಿಂಭಾಗದಲ್ಲಿದ್ದರು, ಸೀಟ್​ ಬೆಲ್ಟ್​ ಧರಿಸಿರಲಿಲ್ಲ. ಡ್ರೈವರ್​ ಸೀಟಿಗೆ ಇರುವಂತಹ ಬೆಲ್ಟ್​ ಹಿಂಬದಿ ಸೀಟಿಗೂ ಇರಬೇಕೆಂಬ ಕುರಿತು ಅನುಷ್ಠಾನದ ಬಗ್ಗೆ ಸಚಿವಾಲಯವು ಕೆಲಸ ಮಾಡುತ್ತಿದೆ ಎಂದು ಸಚಿವ ಗಡ್ಕರಿ ಹೇಳಿದ್ದಾರೆ. ಹಾಗೆ ಎಲ್ಲಾ ಪ್ರಯಾಣಿಕರಿಗೆ ಸುರಕ್ಷಿತವಾಗಿಸಲು ಎಲ್ಲಾ ಕಾರುಗಳಲ್ಲಿ ಆರು ಏರ್​ಬ್ಯಾಗ್​ಗಳನ್ನು ಕಡ್ಡಾಯಗೊಳಿಸುವುದು ಎಂದಿದ್ದಾರೆ.

- Advertisement -
spot_img

Latest News

error: Content is protected !!