Thursday, June 25, 2026
Homeಕರಾವಳಿಉಡುಪಿಈಶ್ವರ ಮಲ್ಪೆ ತಂಡದಿಂದ ಮತ್ತೆ ಗಂಗಾವಳಿ ನದಿಯಲ್ಲಿ ಶೋಧ ಕಾರ್ಯ   

ಈಶ್ವರ ಮಲ್ಪೆ ತಂಡದಿಂದ ಮತ್ತೆ ಗಂಗಾವಳಿ ನದಿಯಲ್ಲಿ ಶೋಧ ಕಾರ್ಯ   

- Advertisement -
- Advertisement -

ಮಲ್ಪೆ: ನದಿಯ ನೀರಿನ ಹರಿವಿನ ಪ್ರಮಾಣ ಅಮಾವಾಸ್ಯೆ ಹಾಗೂ ಹುಣ್ಣಿಮೆಯಲ್ಲಿ, ಸಮುದ್ರದ ಉಬ್ಬರವನ್ನು ಅವಲಂಬಿಸಿ ಕೆಲವು ಸಲ ಇಳಿಮುಖಗೊಳ್ಳುವ ಸಾಧ್ಯತೆ ಇರುವುದರಿಂದ ಆ. 4ರ ಅಮಾವಾಸ್ಯೆಯಂದು ಈಶ್ವರ ಮಲ್ಪೆ ಅವರು ಅಂಕೋಲ ಶಿರೂರು ಗುಡ್ಡ ಕುಸಿತ ಪ್ರದೇಶದಲ್ಲಿ ಹರಿಯುತ್ತಿರುವ ಗಂಗಾವಳಿ ನದಿಯಲ್ಲಿ ಮೃತದೇಹದ ಶೋಧ ಕಾರ್ಯಾಚರಣೆ ನಡೆಸಲು ಮುಂದಾಗಿದ್ದಾರೆ.

ಈಶ್ವರ ಮಲ್ಪೆ ತಂಡ ಜು. 27ರಂದು 8 ಬಾರಿ, 28ರಂದು 2 ಸಲ ಸಹಿತ ಒಟ್ಟು 10 ಬಾರಿ ನೀರಿನಲ್ಲಿ ಶೋಧ ನಡೆಸಿದರು, ಮೃತದೇಹದ ಸುಳಿವು ಸಿಕ್ಕಿರಲಿಲ್ಲ. ಕೆಂಪು ಮಿಶ್ರಿತ ನೀರಿನಿಂದಾಗಿ ಪತ್ತೆ ಕಾರ್ಯಕ್ಕೆ ತೊಡಕಾಗಿತ್ತು. ಇದೇ ಕಾರಣದಿಂದ ಜಿಲ್ಲಾಡಳಿತ ಕೂಡ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಿತ್ತು.

ತಂಡವು ಶೋಧಕಾರ್ಯಕ್ಕೆ ಆ. 4ರಂದು ಮುಂಜಾನೆ 3 ಗಂಟೆಗೆ ಮಲ್ಪೆಯಿಂದ ತೆರಳಲಿದ್ದು, 7 ಗಂಟೆಗೆ ಗಂಗಾವಳಿ ನದಿಯಲ್ಲಿ ಕಾರ್ಯಾಚರಣೆ ನಡೆಸಲಿದ್ದೇವೆ ಎಂದು ಈಶ್ವರ್‌ ಮಲ್ಪೆ ತಿಳಿಸಿದ್ದಾರೆ.

- Advertisement -

Latest News

error: Content is protected !!