Wednesday, June 24, 2026
Homeಕರಾವಳಿಉಚ್ಚ ನ್ಯಾಯಾಲಯದ ನ್ಯಾಯಾಧೀಶರಿಂದ ಬಂಟ್ವಾಳ ನ್ಯಾಯಾಧೀಶರ ಹೊಸ ಕ್ವಾಟ್ರಸ್ ಉದ್ಘಾಟನೆ ಮತ್ತು ವಕೀಲರ ಸಂಘದ ಭೇಟಿ

ಉಚ್ಚ ನ್ಯಾಯಾಲಯದ ನ್ಯಾಯಾಧೀಶರಿಂದ ಬಂಟ್ವಾಳ ನ್ಯಾಯಾಧೀಶರ ಹೊಸ ಕ್ವಾಟ್ರಸ್ ಉದ್ಘಾಟನೆ ಮತ್ತು ವಕೀಲರ ಸಂಘದ ಭೇಟಿ

- Advertisement -
- Advertisement -

ಬಿಸಿರೋಡ್: ಕರ್ನಾಟಕ ಉಚ್ಚ ನ್ಯಾಯಾಲಯದ ಗೌರವಾನ್ವಿತ ನ್ಯಾಯಮೂರ್ತಿಗಳು ಹಾಗೂ ಆಡಳಿತಾತ್ಮಕ ನ್ಯಾಯಾಧೀಶರಾದ ಶ್ರೀ ಅಶೋಕ್ ಎಸ್ ಕಿಣಗಿ ಯವರು ಬಿಸಿ ರೋಡ್ ಪರ್ಲಿಯ ಬಳಿ ಇರುವ ಬಂಟ್ವಾಳದ ನ್ಯಾಯಾಧೀಶರ ಹೊಸ ಕ್ವಾಟ್ರಸ್ ನ ಉದ್ಘಾಟನೆ ಯನ್ನು ಇಂದು ಬೆಳಿಗ್ಗೆ 8.30 ನಡೆಸಿದರು. ಅವರ ಜೊತೆ ಹೈಕೋರ್ಟ್ ನ ನ್ಯಾಯಾಧೀಶರಾದ ಶ್ರೀ ರಾಜೇಶ್ ರೈ ಕಲ್ಲಂಗಳ ರವರು ಉಪಸ್ಥಿತರಿದ್ದರು.

ಉದ್ಘಾಟನೆಯ ಕಾರ್ಯಕ್ರಮದ ನಂತರ ಬೆಳಿಗ್ಗೆ 9.00 ಗಂಟೆಗೆ ಸರಿಯಾಗಿ ವಕೀಲರ ಸಂಘ (ರಿ), ಬಂಟ್ವಾಳಕ್ಕೆ ಆಗಮಿಸಿದರು. ವಕೀಲರ ಸಂಘ (ರಿ), ಬಂಟ್ವಾಳದ ವತಿಯಿಂದ ಗೌರವಾನ್ವಿತ ನ್ಯಾಯಾಧೀಶರು ಗಳನ್ನು ಗೌರವಿಸಲಾಯಿತು.

ಕರ್ನಾಟಕ ಉಚ್ಚ ನ್ಯಾಯಾಲಯದ ಗೌರವಾನ್ವಿತ ನ್ಯಾಯಮೂರ್ತಿಗಳು ಹಾಗೂ ಆಡಳಿತಾತ್ಮಕ ನ್ಯಾಯಾಧೀಶರಾದ ಶ್ರೀ ಅಶೋಕ್ ಎಸ್ ಕಿಣಗಿ ಮಾತಾಡಿ ಬಂಟ್ವಾಳದ ವಕೀಲರ ಅಶೋತ್ತರಗಳಿಗೆ ಸ್ಪಂದಿಸುವುದಾಗಿ, ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ನ್ಯಾಯಧೀಶರಾದ ಶ್ರೀ ರವೀಂದ್ರ ಎಂ ಜೋಷಿ ಹಾಗೂ ಬಂಟ್ವಾಳದ ನ್ಯಾಯಧೀಶರುಗಳು ಉಪಸ್ಥಿತರಿದ್ದರು. ವಕೀಲರ ಸಂಘ (ರಿ), ಬಂಟ್ವಾಳದ ಅಧ್ಯಕ್ಷರಾದ ರಿಚರ್ಡ್ ಕೊಸ್ತ ಎಂ ರವರು ಸ್ವಾಗತಿಸಿದರು. ನರೇಂದ್ರನಾಥ ಭoಡಾರಿ ಯವರು ಕಾರ್ಯಕ್ರಮ ನಿರೂಪಿಸಿದರು. ಬಂಟ್ವಾಳದ ಹಿರಿಯ ಕಿರಿಯ ವಕೀಲ ಮಿತ್ರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

- Advertisement -

Latest News

error: Content is protected !!