Thursday, June 4, 2026
Homeಕರಾವಳಿಉಡುಪಿಮಳೆ ಹಾನಿ ಪರಿಹಾರ ಕಾರ್ಯಕ್ಕೆ ದ.ಕ. ಜಿಲ್ಲೆಗೆ 20 ಕೋಟಿ, ಉಡುಪಿ ಜಿಲ್ಲೆಗೆ 15 ಕೋಟಿ...

ಮಳೆ ಹಾನಿ ಪರಿಹಾರ ಕಾರ್ಯಕ್ಕೆ ದ.ಕ. ಜಿಲ್ಲೆಗೆ 20 ಕೋಟಿ, ಉಡುಪಿ ಜಿಲ್ಲೆಗೆ 15 ಕೋಟಿ ಎಸ್ ಡಿಆರ್ ಎಫ್ ಅನುದಾನ ಬಿಡುಗಡೆ

- Advertisement -
- Advertisement -

ಬೆಂಗಳೂರು: ಮಳೆ ಹಾನಿ ಸಂಬಂಧಿತ ಪರಿಹಾರ ಕಾರ್ಯಗಳಿಗಾಗಿ ಇಂದು ದಕ್ಷಿಣ ಕನ್ನಡ ಜಿಲ್ಲೆಗೆ 20 ಕೋಟಿ ರೂಪಾಯಿ ಮತ್ತು ಉಡುಪಿ ಜಿಲ್ಲೆಗೆ 15 ಕೋಟಿ ರೂಪಾಯಿ ಅನುದಾನವನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ.

ಒಟ್ಟು 21 ಜಿಲ್ಲೆಗಳಲ್ಲಿ ಮಳೆ ಹಾನಿಗೆ ಇಂದು ಒಟ್ಟು 200 ಕೋಟಿ ರೂಪಾಯಿ ರಾಜ್ಯ ವಿಪತ್ತು ನಿರ್ವಹಣಾ ನಿಧಿಯಿಂದ ಕಂದಾಯ ಇಲಾಖೆ ಬಿಡುಗಡೆ ಮಾಡಿದೆ.ಆಗಸ್ಟ್ 4 ರಂದು ರಾಜ್ಯ ಸರ್ಕಾರ 300 ಕೋಟಿ ರೂಪಾಯಿ ಎಸ್ ಡಿಆರ್ ಎಫ್ ನಿಧಿಯಿಂದ ಬಿಡುಗಡೆ ಮಾಡಿತ್ತು

ಇಂದು ಮಳೆ ಪೀಡಿತ ಜಿಲ್ಲಾಡಳಿತಗಳ ಜೊತೆಗಿನ ವೀಡಿಯೋ ಕಾನ್ಫರೆನ್ಸ್ ಬಳಿಕ ಜಿಲ್ಲೆಗಳಿಂದ ಬಂದಿರುವ ಬೇಡಿಕೆ ಹಿನ್ನೆಲೆಯಲ್ಲಿ ಹೆಚ್ಚುವರಿಯಾಗಿ 200 ಕೋಟಿ ರೂಪಾಯಿ ಜಿಲ್ಲಾಧಿಕಾರಿಗಳ ಖಾತೆಗೆ ಬಿಡುಗಡೆ ಮಾಡಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

- Advertisement -

Latest News

error: Content is protected !!