Sunday, June 7, 2026
Homeತಾಜಾ ಸುದ್ದಿಭಾರತದ 14ನೇ‌ ಉಪರಾಷ್ಟ್ರಪತಿಯಾಗಿ ಜಗದೀಪ್ ಧನ್ಕರ್ ಆಯ್ಕೆ

ಭಾರತದ 14ನೇ‌ ಉಪರಾಷ್ಟ್ರಪತಿಯಾಗಿ ಜಗದೀಪ್ ಧನ್ಕರ್ ಆಯ್ಕೆ

- Advertisement -
- Advertisement -

ನವದೆಹಲಿ: ಭಾರತದ 14 ನೇ ಉಪರಾಷ್ಟ್ರಪತಿಯಾಗಿ ಜಗದೀಪ್ ಧನ್ ಕರ್ ಆಯ್ಕೆಯಾಗಿದ್ದಾರೆ.

ಇಂದು ಉಪರಾಷ್ಟ್ರಪತಿ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಎನ್ ಡಿಎ ಅಭ್ಯರ್ಥಿಯಾಗಿ ಸ್ಫರ್ಧಿಸಿದ್ದ ಜಗದೀಪ್ ಧನ್ ಕರ್, ಯುಪಿಎ ಅಭ್ಯರ್ಥಿ ಮಾರ್ಗರೇಟ್ ಆಳ್ವಾ ಅವರನ್ನು ಸೋಲಿಸಿ ಗೆಲುವು ಸಾಧಿಸಿದ್ದಾರೆ.

ಒಟ್ಟು 528 ಮತಗಳನ್ನು ಧನ್ ಕರ್ ಪಡೆದಿದ್ದು, ಇಂದು ನಡೆದ ಚುನಾವಣೆಯಲ್ಲಿ ಒಟ್ಟು 725 ಸಂಸದರು ಮತ ಚಲಾಯಿಸಿದ್ದರು.

ಆಗಸ್ಟ್ 11 ರಂದು ಜಗದೀಪ್ ಧನ್ ಕರ್ ಭಾರತದ ಉಪರಾಷ್ಟ್ರಪತಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

- Advertisement -

Latest News

error: Content is protected !!