Wednesday, June 3, 2026
Homeಕರಾವಳಿಮಾರಣಾಂತಿಕ ಹಲ್ಲೆಗೊಳಗಾಗಿದ್ದ SDPI ಕೇರಳ ರಾಜ್ಯ ಕಾರ್ಯದರ್ಶಿ ಕೆ.ಎಸ್ ಶಾನ್ ನಿಧನ !

ಮಾರಣಾಂತಿಕ ಹಲ್ಲೆಗೊಳಗಾಗಿದ್ದ SDPI ಕೇರಳ ರಾಜ್ಯ ಕಾರ್ಯದರ್ಶಿ ಕೆ.ಎಸ್ ಶಾನ್ ನಿಧನ !

- Advertisement -
- Advertisement -

ತಿರುವನಂತಪುರಂ: ತಂಡವೊಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ( SDPI ) ಕೇರಳ ರಾಜ್ಯ ಕಾರ್ಯದರ್ಶಿ ಕೆ.ಎಸ್ ಶಾನ್ ಎಂಬವರ ಮೇಲೆ ಮಾರಣಾಂತಿಕ ದಾಳಿ ನಡೆಸಿ ಕೊಲೆ ಮಾಡಿದದ್ದಾರೆ. ಈ ಘಟನೆ ಆಲಪ್ಪುಝ ಮನ್ನಂಚೇರಿಯಲ್ಲಿ ನಡೆದಿದೆ.

ರಾತ್ರಿ ಮಣ್ಣಂಚೇರಿ ಬಳಿ ಬೈಕ್ ನಲ್ಲಿ ಬರುತ್ತಿದ್ದ ಎಸ್. ಡಿ.ಪಿ.ಐ ಕೇರಳ ರಾಜ್ಯ ಸಮಿತಿ ಸದಸ್ಯ ಕೆ.ಎಸ್ ಶಾನ್ ರವರ ಬೈಕ್ ಗೆ ವಾಹನ ಡಿಕ್ಕಿ ಹೊಡೆದಿದೆ . ಕೆಳಗೆ ಬಿದ್ದಾಗ ಆರ್ ಎಸ್ ಎಸ್ ಕಾರ್ಯಕರ್ತರು ಅಪಘಾತವೆಸಗಿ, ನಂತರ ಮಾರಕಾಸ್ತ್ರಗಳಿಂದ ದಾಳಿ ಮಾಡಿ ಕೊಲೆ ಮಾಡಿದ್ದಾರೆ.

ಪರಿಣಾಮ ಅವರ ತಲೆ ಕೈಕಾಲು ಸೇರಿದಂತೆ ದೇಹದ ಹಲವೆಡೆ ಗಂಭೀರ ಗಾಯಗಳಾಗಿವೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಅವರನ್ನು ಸ್ಥಳೀಯರು ತಕ್ಷಣ ಅಲ್ಲಿನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

ರಾಜ್ಯ ಕಾರ್ಯದರ್ಶಿಯ ಕೊಲೆಯನ್ನು ಖಂಡಿಸಿ ಕೇರಳ ಎಸ್. ಡಿ.ಪಿ.ಐ ಕಾರ್ಯಕರ್ತರು ಎಲ್ಲಾ ಜಿಲ್ಲೆಗಳಲ್ಲಿ ಪ್ರತಿಭಟನೆ ನಡೆಸಿದ್ದಾರೆ .

- Advertisement -

Latest News

error: Content is protected !!