Wednesday, June 3, 2026
Homeಕರಾವಳಿಸಚಿವ ಜಮೀರ್ ಫಂಡಿಂಗ್ ಆರೋಪ‌; ಸ್ಪಷ್ಟತೆ ನೀಡಿದ ಎಸ್‌ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್

ಸಚಿವ ಜಮೀರ್ ಫಂಡಿಂಗ್ ಆರೋಪ‌; ಸ್ಪಷ್ಟತೆ ನೀಡಿದ ಎಸ್‌ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್

- Advertisement -
- Advertisement -

ಮಂಗಳೂರು: ಎಸ್‌ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಅವರು ಎಸ್‌ಡಿಪಿಐಗೆ ಸಚಿವ ಜಮೀರ್ ಅವರು ಫಂಡಿಂಗ್ ಮಾಡಿದ್ದಾರೆ ಎನ್ನುವ ಆರೋಪ‌ದ ವಿಚಾರವಾಗಿ ಮಂಗಳೂರಿನಲ್ಲಿ ಹೇಳಿಕೆ ನೀಡಿದ್ದಾರೆ.

ಜಮೀರ್ ಅಹಮ್ಮದ್ ಒಂದು ರಾಜಕೀಯ ಪಕ್ಷದ ಮಂತ್ರಿಯಾಗಿದ್ದು, ನಮಗೆ ಯಾಕೆ ಅವರು ಫಂಡಿಂಗ್ ಮಾಡುತ್ತಾರೆ?. ನಾವು ಕ್ರೌಡ್ ಫಂಡಿಂಗ್ ಮೂಲಕ ಚುನಾವಣೆ ನಡೆಸೋದು. ನಮಗೆ ನಮ್ಮ ಕಾರ್ಯಕರ್ತರು ಹಣ ಕೊಡುತ್ತಾರೆ.  ಜನ ನಮಗೆ ನೋಟು ಕೊಟ್ಟಿದ್ದಾರೆ, ವೋಟು ಕೊಟ್ಟಿದ್ದಾರೆ. ಆ ರೀತಿ ಫಂಡಿಂಗ್ ತೆಗೆದುಕೊಳ್ಳುವ ಸಿಸ್ಟಮ್ ನಮ್ಮಲ್ಲಿ ಇಲ್ಲ. ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ 70% ಅಹಿಂದ ಮತಗಳಿವೆ. ಇದರಲ್ಲಿ 38% ಮುಸ್ಲಿಂ ಮತಗಳಿವೆ. ಕಾಂಗ್ರೆಸ್ ನಲ್ಲಿ ಮುಸ್ಲಿಂ ನಾಯಕರಿಗೆ ಟಿಕೇಟ್ ಕೊಡಿ ಅಂತಾ ಅಲ್ಲಿನವರು ಕೇಳಿದ್ದರು. ಆದರೆ ಟಿಕೇಟ್ ಕೊಡದಿದ್ದಾಗ ಜನ ರೊಚ್ಚಿಗೆದ್ದರು ಎಂದು ತಿಳಿಸಿದರು.

- Advertisement -

Latest News

error: Content is protected !!