Thursday, June 4, 2026
Homeಕರಾವಳಿಬೆಳ್ತಂಗಡಿ ಪೊಲೀಸರಿಂದ ಪುನೀತ್ ಕೆರೆಹಳ್ಳಿ ಬೆಂಗಳೂರಿನಲ್ಲಿ ಬಂಧನ

ಬೆಳ್ತಂಗಡಿ ಪೊಲೀಸರಿಂದ ಪುನೀತ್ ಕೆರೆಹಳ್ಳಿ ಬೆಂಗಳೂರಿನಲ್ಲಿ ಬಂಧನ

- Advertisement -
- Advertisement -

ಬೆಳ್ತಂಗಡಿ : ಸಮಾಜದಲ್ಲಿ ದ್ವೇಷ ಉಂಟು ಮಾಡುವ ರೀತಿಯಲ್ಲಿ ಭಾಷಗೈದು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ಬಾರಿ ನೋಟೀಸ್ ಜಾರಿ ಮಾಡಿದ್ರೂ ವಿಚಾರಣೆಗೆ ಹಾಜರಾಗದ ಹಿಂದೂ ಪರ ಕಾರ್ಯಕರ್ತ ಪುನೀತ್ ಕೆರೆಹಳ್ಳಿಯನ್ನು ಏ.15 ರಂದು ಬೆಂಗಳೂರಿನಲ್ಲಿ ಬೆಳ್ತಂಗಡಿ ಪೊಲೀಸರು ಬಂಧಿಸಿದ್ದಾರೆ.

ಬೆಳ್ತಂಗಡಿಯ ಕಸಬಾ ಗ್ರಾಮದ ಹುಣ್ಸೆಕಟ್ಟೆ ನಿವಾಸಿ ಜೋರಮ್ ಬರ್ಬೋಝ ಎಂಬುವರು 2025ರ ಆಗಸ್ಟ್ 7 ರಂದು ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದು ಬಿಎನ್‌ಎಸ್ ೨೦೨೩ ಸೆಕ್ಸನ್ ೨೯೬ರಂತೆ ಪ್ರಕರಣ ದಾಖಲಾಗಿತ್ತು.

ಬೆಳ್ತಂಗಡಿ ಪೊಲೀಸರು ನೀಡಿದ ಮೂರು ನೋಟಿಸ್‌ಗೆ ಹಾಜರಾಗದ ಕಾರಣ ಬೆಳ್ತಂಗಡಿ ನ್ಯಾಯಾಲಯದಿಂದ ಬಂಧನ ವಾರಂಟ್ ಪಡೆದು ಏ.15 ರಂದು ಬೆಂಗಳೂರಿಗೆ ತೆರಳಿದ ಬೆಳ್ತಂಗಡಿ ಪೊಲೀಸರು ಹಿಂದೂ ಸಂಘಟನೆಯ ಪುನೀತ್ ಕೆರೆಹಳ್ಳಿಯನ್ನು ಬಸವನಗುಡಿ ಕಚೇರಿಯಲ್ಲಿ ಬಂಧಿಸಿದ್ದಾರೆ.ಬೆಳ್ತಂಗಡಿ ಪೊಲೀಸರು ಸಂಜೆ ಬೆಳ್ತಂಗಡಿ ಪೊಲೀಸ್ ಠಾಣೆಗೆ ಕರೆದುಕೊಂಡು ಬಂದು ಬಳಿಕ ವಿಚಾರಣೆ ನಡೆಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ.

ಪ್ರಕರಣದ ವಿವರ:
ದೂರುದಾರ ಜೋರಮ್ ಬರ್ಬೋಝ ಎಂಬುವವರು ೦೭-೦೮-೨೦೨೫ ರಂದು ಸಮಯ ೧೧.೦೦ ಗಂಟೆಗೆ ತಮ್ಮ ಮೊಬೈಲ್‌ನಲ್ಲಿ ಸಾಮಾಜಿಕ ಜಾಲತಾಣವಾದ ಫೇಸ್ಟುಕ್‌ನಲ್ಲಿ ದೇಶಗಳನ್ನು ಪರಿಶೀಲಿಸುತ್ತಿರುವಾಗ ಪುನೀತ್ ಕರೆಹಳ್ಳಿ ಎಂಬಾತನು ಸಾಮಾಜಿಕ ಜಾಲತಾಣವಾದ ಯೂಟ್ಯೂಬ್‌ಲಿ, ‘ಧರ್ಮಸ್ಥಳದವರ ಮೇಲೆ ನೀನು ಕೈ ಎತ್ತಿನೋಡುವ, ಆಟೋ ರಿಕ್ಷಾದವಿಗೆ ಮುಟ್ಟಿಯಾ ನೀನು? ನೀನು ಅಪ್ಪನಿಗೆ ಹುಟ್ಟಿದ್ರೆ ಬೆರ್ಕೆಗೆ ಹುಟ್ಟಿದ್ರೆ ಬೇಡ..ಅಪ್ಪನಿಗೆ ಹುಟ್ಟಿದ್ರೆ ಮುಟ್ಟಿ ನೋಡೋಣ. ಆಮೇಲೆದ್ದು ಮುಂದಿನ ಚರಿತ್ರೆನ ನಾನು ಬರೀತಿನಿ, ಅಂಗಡಿಯನ್ನಿಗೆ ಧರ್ಮಸ್ಥಳದೊಳಕ್ಕೆ ನುಗ್ಗಿ ಹೊಡಿತನಂತೆ ರಿಕ್ಷಾದವಿಗೆ, ಏನ್ ಬಿಟ್ಟಿಬಿದ್ದಿದ್ದಿವಿ ಅಂಡ್ಕೊಂಡಿದ್ಯಾ? ಎಲಿಯವರೆಗೆ ಕಟ್ಟಿದ ಬುರುಡೆ ಪುರಾಣಗಳೆಲ್ಲ ಮುಗೀತು, ಅಲ್ಲಿ ಏನು ಸಿಗ್ಲಿಲ್ಲ, ಈಗ ಹೊಸ ಕತೆ ಶುರು ಮಾಡಿದ್ರಾ. ನೀನು ನಿನ್ನ ಮುಟ್ಟಾಳ, ನಿನ್ನ ಕುಡುಕರ ಗ್ಯಾಂಗ್‌ನ್ನು ಕರ್ಕೊಂಡು ಬಾ ಅಪ್ಪನಿಗೆ ಹುಟ್ಟಿದ್ರೆ, ಬೆರ್ಕೆಗೆ ಹುಟ್ಟಿದ್ರೆ ಬೇಡ, ಅಪ್ಪನಿಗೆ ಹುಟ್ಟಿದ್ರೆ ಮುಟ್ಟಿ ನೋಡು, ನಾವು ತೋರಿಸ್ತೇವೆ ಏನು ಅಂತ “ಎಂಬುದಾಗಿ ಆಶ್ಲೀಲವಾಗಿ ಮಾತನಾಡಿರುವ ವೀಡಿಯೋದ ತುಣುಕನ್ನು ವಿದ್ಯುನ್ಮಾನ ಸಾಧನಗಳಾದ ಯೂಟ್ಯೂಬ್‌ನಲ್ಲಿ ಪ್ರಸಾರ ಮಾಡಿರುವುದಾಗಿದೆ.

- Advertisement -

Latest News

error: Content is protected !!