Tuesday, May 14, 2024
Homeಕರಾವಳಿಮಂಗಳೂರು: ಗ್ರಾಮಪಂಚಾಯತ್ ನ ಅಧಿಕಾರ ಪಡೆದ ಎಸ್‌ಡಿಪಿಐ ಬೆಂಬಲಿತರು

ಮಂಗಳೂರು: ಗ್ರಾಮಪಂಚಾಯತ್ ನ ಅಧಿಕಾರ ಪಡೆದ ಎಸ್‌ಡಿಪಿಐ ಬೆಂಬಲಿತರು

spot_img
- Advertisement -
- Advertisement -

ಮಂಗಳೂರು: ನಗರದ ಹೊರವಲಯದ ಪಾವೂರು ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಜಯಗಳಿಸಿದ್ದ ಎಸ್‌ಡಿಪಿಐ ಬೆಂಬಲಿತ ಅಭ್ಯರ್ಥಿಗಳು ಇದೀಗ ಪಂಚಾಯತ್ ನ ಅಧಿಕಾರ ಪಡೆದಿದ್ದಾರೆ.

ಈ ಹಿಂದೆ ಕಾಂಗ್ರೆಸ್ ಪಕ್ಷದ ಭದ್ರಕೋಟೆಯಾಗಿದ್ದ ಪಾವೂರು ಗ್ರಾಮ ಪಂಚಾಯತಿಯಲ್ಲಿ ಮೊದಲ ಬಾರಿಗೆ ಎಸ್‌ಡಿಪಿಐ ಬೆಂಬಲಿತ ಅಭ್ಯರ್ಥಿಗಳು ಅಧಿಕ ಸ್ಥಾನಗಳನ್ನು ಗೆದ್ದು, ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಇದರಲ್ಲಿ ಎಸ್‌ಡಿಪಿಐ ಬೆಂಬಲಿತ 6 ಸದಸ್ಯರು, ಕಾಂಗ್ರೆಸ್ ಬೆಂಬಲಿತ 5 ಸದಸ್ಯರು, ಬಿಜೆಪಿ ಬೆಂಬಲಿತ 2 ಸದಸ್ಯರು ಹಾಗೂ ಜೆಡಿಎಸ್ ಬೆಂಬಲಿತ 2 ಸದಸ್ಯರಿದ್ದಾರೆ.

ಒಟ್ಟು 15 ಸ್ಥಾನಗಳುಳ್ಳ ಪಾವೂರು ಗ್ರಾಮ ಪಂಚಾಯತಿಯಲ್ಲಿ ಅಧ್ಯಕ್ಷ ಸ್ಥಾನ ಪಡೆಯಲು ಮ್ಯಾಜಿಕ್ ನಂಬರ್ 8 ಆಗಿದೆ. ಪಂಚಾಯತಿ ಅಧ್ಯಕ್ಷ ಸ್ಥಾನ ಪಡೆಯಲು ಅಂತಿಮವಾಗಿ ಜೆಡಿಎಸ್ 2 ಸದಸ್ಯರು ಎಸ್‌ಡಿಪಿಐನ 6 ಸದಸ್ಯರಿಗೆ ಬೆಂಬಲ ನೀಡುವ ಮೂಲಕ ಎಸ್‌ಡಿಪಿಐ ಬೆಂಬಲಿತ ಸದಸ್ಯರು ಪಾವೂರು ಗ್ರಾಮ ಪಂಚಾಯತಿಯಲ್ಲಿ ಅಧಿಕಾರ ಹಿಡಿದಿದ್ದಾರೆ. ಗ್ರಾಮ ಪಂಚಾಯತಿ ಅಧ್ಯಕ್ಷೆಯಾಗಿ ಖಮರುನ್ನಿಸಾ ಹಾಗೂ ಉಪಾಧ್ಯಕ್ಷರಾಗಿ ಅನ್ಸಾರ್ ಇಲೋನಿ ಆಯ್ಕೆಯಾಗಿದ್ದಾರೆ.

- Advertisement -
spot_img

Latest News

error: Content is protected !!