Saturday, June 6, 2026
Homeತಾಜಾ ಸುದ್ದಿಬಸ್ ನಿಲ್ದಾಣದಲ್ಲೇ ಪ್ರೇಮಿಗಳ ಕಿಸ್ಸಿಂಗ್ ಕಿಸ್ಸಿಂಗ್: ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್...

ಬಸ್ ನಿಲ್ದಾಣದಲ್ಲೇ ಪ್ರೇಮಿಗಳ ಕಿಸ್ಸಿಂಗ್ ಕಿಸ್ಸಿಂಗ್: ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್…

- Advertisement -
- Advertisement -

ಮಂಡ್ಯ:  ಪ್ರೀತಿ ಅನ್ನೋದು ಒಂದು ಅಮಲು ಅನ್ನೋ ಮಾತಿದೆ. ಆದ್ರೆ ಅದೇ ಪ್ರೀತಿ ನೋಡುವವರಿಗೆ ಅಸಹ್ಯ ಹುಟ್ಟಿಸಬಾರದು. ಜೊತೆಗೆ ಮುಜುಗರ ತರಬಾರದು. ಆದ್ರೆ ಇದೇ ಪ್ರೀತಿ ಹೆಸರಲ್ಲಿ ಯುವಕ ಹಾಗೂ ಯುವತಿ ಮೈಮರೆತ ಘಟನೆ ಮಂಡ್ಯದಲ್ಲಿ ನಡೆದಿದೆ.

ಹೌದು.. ಮಂಡ್ಯದ ಕೆಎಸ್ ಆರ್ ಟಿ ಬಿ ಬಸ್ ನಿಲ್ದಾಣದಲ್ಲಿ ಯುವ ಪ್ರೇಮಿಗಳಿಬ್ಬರು ಸಾರ್ವಜನಿಕ ಸ್ಥಳದಲ್ಲಿಯೇ ಚುಂಬನದಲ್ಲಿ ಮೈಮರೆತಿದ್ದಾರೆ.  ಸಾರ್ವಜನಿಕರ ಪರಿವೇ ಇಲ್ಲದೇ, ಪರಸ್ಪರ ಅಪ್ಪಿ ಚುಂಬಿಸಿದ್ದಾರೆ. ಈ ದೃಶ್ಯವನ್ನು ಬಸ್ ನಿಲ್ದಾಣದಲ್ಲಿದ್ದ ಕೆಲವರು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ.

ಇದೀಗ ಈ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲೂ ಹರಿದಾಡುತ್ತಿದ್ದು, ಫೋಟೋ ನೋಡಿದಂತ ನೆಟ್ಟಿಗರು ಸಾರ್ವಜನಿಕ ಸ್ಥಳದಲ್ಲೇ ಯುವ ಪ್ರೇಮಿಗಳು ಚುಂಬಿಸಿದ್ದಕ್ಕೆ ಆಕ್ಷೇಪ ವ್ಯಕ್ತ ಪಡಿಸಿದ್ದಾರೆ.

- Advertisement -

Latest News

error: Content is protected !!