ಕೇರಳ: ನಮಾಜ್ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದ ವ್ಯಕ್ತಿಯನ್ನು ಹಾಡುಹಗಲೇ ಕಡಿದು ಕೊಲೆ ಮಾಡಿರುವ ಘಟನೆ ಕೇರಳದ ಪಾಲ್ ಕ್ಕಾಡ್ ನಲ್ಲಿ ನಡೆದಿದೆ.
ಪಾಲ್ ಕ್ಕಾಡ್ ನ ಎಲ್ಲಪುಲ್ಲಿಯ ಸುಬೈರ್ (44) ಕೊಲೆಯಾದ ದುರ್ದೈವಿ. ಮೃತ ಸುಬೈರ್ ಎಸ್ ಡಿ ಪಿ ಐ ಜಿಲ್ಲಾ ಸಮಿತಿ ಸದಸ್ಯ. ಆರ್ ಎಸ್ ಎಸ್ ಹಾಗೂ ಬಿಜೆಪಿ ಕಾರ್ಯಕರ್ತರಿಂದಲೇ ಸುಬೈರ್ ಕೊಲೆಯಾಗಿದೆ ಎಂದು ಆರೋಪಿಸಲಾಗಿದೆ. ನಿನ್ನೆ ಸುಬೈರ್ ಶುಕ್ರವಾರ ಹಿನ್ನೆಲೆ ನಮಾಝ್ ಮುಗಿಸಿ, ಸುಮಾರು ಮಧ್ಯಾಹ್ನ 1-10 ತಂದೆಯೊಂದಿಗೆ ಬೈಕ್ ನಲ್ಲಿ ಮನೆಗೆ ತೆರಳುತ್ತಿದ್ದರು. ಈ ವೇಳೆ ಹಿಂದಿನಿಂದ ಬಂದ ಕಾರೊಂದು ಬೈಕ್ ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಬೈಕ್ ಉರುಳಿ ಬಿದ್ದಿದೆ. ಈ ವೇಳೆ ಇನ್ನೊಂದು ಕಾರಿನಲ್ಲಿ ಬಂದ ನಾಲ್ವರ ತಂಡ ಸುಬೈರ್ ಮೇಲೆ ಮಾರಕಾಸ್ತ್ರಗಳಿಂದ ಮಾಡಿದೆ.
ರಕ್ತದ ಮಡುವಿನಲ್ಲಿ ಬಿದ್ದಿದ್ದ ಸುಬೈರ್ ಅವರನ್ನು ಕೂಡಲೇ ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದೆ.ಆದರೆ ಅಷ್ಟರಲ್ಲಿ ಸುಬೈರ್ ಸಾವನ್ನಪ್ಪಿದ್ದಾರೆ. ಕಳೆದ ನವೆಂಬರ್ 15 ರಂದು ಎಲ್ಲಪಲ್ಲಿಯಲ್ಲಿ ಆರ್ ಎಸ್ ಎಸ್ ಕಾರ್ಯಕರ್ತ ಸಂಜಿತ್ ನನ್ನು ಹಲ್ಲೆ ಮಾಡಲಾಗಿತ್ತು.ಸುಬೈರ್ ಅವರನ್ನು ಕೊಂದ ರೀತಿಯಲ್ಲೇ ಸಂಜಿತ್ ನನ್ನು ಕೊಲೆ ಮಾಡಲಾಗಿತ್ತು. ಇದಕ್ಕೆ ಪ್ರತಿಕಾರವಾಗಿ ಸುಬೈರ್ ನನ್ನು ಕೊಲೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.


