Saturday, June 6, 2026
Homeಕರಾವಳಿಉಜಿರೆ: ಎಸ್.ಡಿ.ಎಂ ಕಾಲೇಜು ಪ್ರಾಧ್ಯಾಪಕಿ ಚಿತ್ರಾ ಬಿ.ಸಿ ರಿಗೆ ಪಿ.ಹೆಚ್.ಡಿ ಪದವಿ

ಉಜಿರೆ: ಎಸ್.ಡಿ.ಎಂ ಕಾಲೇಜು ಪ್ರಾಧ್ಯಾಪಕಿ ಚಿತ್ರಾ ಬಿ.ಸಿ ರಿಗೆ ಪಿ.ಹೆಚ್.ಡಿ ಪದವಿ

- Advertisement -
- Advertisement -

ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ನಾತಕೋತ್ತರ ಕೇಂದ್ರದ ಸಮಾಜಕಾರ್ಯ ವಿಭಾಗದ ಪ್ರಾಧ್ಯಾಪಕಿ ಚಿತ್ರಾ ಬಿ.ಸಿ ಅವರಿಗೆ ಇತ್ತೀಚೆಗೆ ತುಮಕೂರು ವಿಶ್ವವಿದ್ಯಾಲಯ ಪಿ.ಹೆಚ್.ಡಿ. ಪದವಿಯನ್ನು ನೀಡಿ ಗೌರವಿಸಿದೆ.

ತುಮಕೂರು ವಿಶ್ವವಿದ್ಯಾನಿಲಯದ ಸಮಾಜಕಾರ್ಯ ಸಂಶೋಧನಾ ವಿಭಾಗದ ಪ್ರೊಫೆಸರ್ ಹಾಗು ಚೇರ್ಮನ್ ಡಾ. ಪರಶುರಾಮ ಕೆ. ಜಿ. ಅವರ ಮಾರ್ಗದರ್ಶನದಲ್ಲಿ ಚಿತ್ರಾ ಬಿ.ಸಿ ಮಂಡಿಸಿದ “ಎ ಸ್ಟಡಿ ಆನ್ ವರ್ಕ್ ಲೈಫ್ ಬ್ಯಾಲೆನ್ಸ್ ಓಫ್ ಕೆ. ಎಸ್.ಆರ್. ಟಿ. ಸಿ. ಡ್ರೈವರ್ಸ್ ವಿಥ್ ಸ್ಪೆಷಲ್ ರೆಫೆರೆನ್ಸ್ ಟು ಮೈಸೂರು ಡಿವಿಷನ್” ಎನ್ನುವ ಮಹಾ ಪ್ರಬಂಧಕ್ಕೆ ಈ ಗೌರವ ನೀಡಲಾಗಿದೆ.

ಉಜಿರೆ ಎಸ್.ಡಿ.ಎಂ ಪದವಿ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥ ಹಾಗೂ ಖ್ಯಾತ ವ್ಯಂಗ್ಯಚಿತ್ರಕಾರ ಶೈಲೇಶ್ ಕುಮಾರ್ ಧರ್ಮಪತ್ನಿಯಾಗಿಯಾಗಿರುವ ಚಿತ್ರಾ ಬಿ.ಸಿಯವರು ಮೂಡಿಗೆರೆ ತಾಲೂಕು ಬೀರ್ಗೂರಿನ ಎಸ್. ಚಂದ್ರೆಗೌಡ ಹಾಗೂ ಬಿ. ಎಮ್. ಇಂದ್ರಮ್ಮ ದಂಪತಿ ಪುತ್ರಿ.

- Advertisement -

Latest News

error: Content is protected !!