Saturday, June 6, 2026
Homeತಾಜಾ ಸುದ್ದಿಖ್ಯಾತ ನಟಿ ಮೊಹೆನಾ ಕುಮಾರಿ ಸಿಂಗ್ ಮತ್ತು ಅವರ ಕುಟುಂಬದ ಐವರಿಗೆ ಕೊರೋನಾ ಸೋಂಕು ದೃಢ!

ಖ್ಯಾತ ನಟಿ ಮೊಹೆನಾ ಕುಮಾರಿ ಸಿಂಗ್ ಮತ್ತು ಅವರ ಕುಟುಂಬದ ಐವರಿಗೆ ಕೊರೋನಾ ಸೋಂಕು ದೃಢ!

- Advertisement -
- Advertisement -

ಡೆಹ್ರಾಡೂನ್: ಕಾಣದ ಕೊರೊನಾ ವೈರಸ್‌ ಗೆ ಇಡೀ ಮನುಕುಲವೇ ಮಂಡಿಯೂರಿದೆ. ಈ ಸೋಂಕು ಯಾವ ವರ್ಗದ ಜನರನ್ನೂ ಬಿಟ್ಟಿಲ್ಲ. ಈ ವೈರಸ್‌ಗೆ ಸೆಲಿಬ್ರಿಟಿಗಳೂ ಪರದಾಡುವಂತಾಗಿದೆ. ಮಾರಕ ಕೊರೋನಾ ವೈರಸ್ ಸೆಲೆಬ್ರಿಟಿಗಳಿಗೂ ಹಬ್ಬಿದ್ದು, ಉತ್ತರಾಖಂಡದಲ್ಲಿ ಖ್ಯಾತ ಧಾರಾವಾಹಿ ನಟಿ ಮತ್ತು ಆಕೆಯ ಕುಟುಂಬದ ಐವರಿಗೆ ಕೊರೋನಾ ವೈರಸ್ ಸೋಂಕು ತಗುಲಿದೆ.

ಹಿಂದಿಯ ಯೆ ರಿಷ್ತಾ ಕ್ಯಾ ಕೆಹ್ಲಾತಾ ಹೈ ಎಂಬ ಖ್ಯಾತ ಧಾರಾವಾಹಿಯ ನಟಿ ಮೊಹೆನಾ ಕುಮಾರಿ ಸಿಂಗ್ ಮತ್ತು ಅವರ ಕುಟುಂಬಸ್ಥರಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ.

ಪ್ರಸ್ತುತ ಉತ್ತರಖಾಂಡದ ರಿಷಿಕೇಶದಲ್ಲಿರುವ ಕೊರೊನಾ ನಿಗದಿತ ಆಸ್ಪತ್ರೆಯಲ್ಲಿ ಇಡೀ ಕುಟುಂಬವನ್ನು ಕ್ವಾರಂಟೈನ್ ಮಾಡಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಈ ಬಗ್ಗೆ ಮಾಧ್ಯಮಗಳಿಗೆ ಸ್ವತಃ ನಟಿ ಮೊಹೆನಾ ಕುಮಾರಿ ಸಿಂಗ್ ಸ್ಪಷ್ಟನೆ ನೀಡಿದ್ದಾರೆ. ಹಾಗೂ ನಾವೆಲ್ಲರೂ ಚಿಕಿತ್ಸೆ ಪಡೆಯುತ್ತಿದ್ದೇವೆ ಎಂದು ಹೇಳಿದ್ದಾರೆ.

- Advertisement -

Latest News

error: Content is protected !!