Friday, June 27, 2025
Homeತಾಜಾ ಸುದ್ದಿಇಸ್ಲಾಮಿಕ್‌ ಸಂಘಟನೆಯಿಂದ ಲಿಂಗ ರಾಜಕೀಯದ ಕುರಿತು ತರಗತಿ: ಲಿಂಗ ಪ್ರತ್ಯೇಕಕ್ಕಾಗಿ ವಿದ್ಯಾರ್ಥಿಗಳಿಗೆ ತರಗತಿಯಲ್ಲಿ ಪರದೆ: ಭುಗಿಲೆದ್ದ...

ಇಸ್ಲಾಮಿಕ್‌ ಸಂಘಟನೆಯಿಂದ ಲಿಂಗ ರಾಜಕೀಯದ ಕುರಿತು ತರಗತಿ: ಲಿಂಗ ಪ್ರತ್ಯೇಕಕ್ಕಾಗಿ ವಿದ್ಯಾರ್ಥಿಗಳಿಗೆ ತರಗತಿಯಲ್ಲಿ ಪರದೆ: ಭುಗಿಲೆದ್ದ ವಿವಾದ

spot_img
- Advertisement -
- Advertisement -

ತ್ರಿಶೂರ್: ಕೇರಳದಲ್ಲಿ ಇಸ್ಲಾಮಿಕ್ ಸಂಘಟನೆಯೊಂದು ಇಲ್ಲಿನ ವೈದ್ಯಕೀಯ ವಿದ್ಯಾರ್ಥಿಗಳಿಗೆ ಲಿಂಗ ರಾಜಕೀಯದ ಕುರಿತು ತರಗತಿಗಳನ್ನು ನಡೆಸುತ್ತಿದ್ದು, ಪುರುಷ ಮತ್ತು ವಿದ್ಯಾರ್ಥಿನಿಯರನ್ನು ಪ್ರತ್ಯೇಕವಾಗಿ ಕುಳಿತುಕೊಳ್ಳುವಂತೆ ಮಾಡಿ, ಪರದೆಯಿಂದ ವಿಭಜಿಸಲಾಗಿದ್ದು, ವಿವಾದ ಭುಗಿಲೆದ್ದಿದೆ.

ಕೇರಳ ಶಾಸ್ತ್ರ ಸಾಹಿತ್ಯ ಪರಿಷತ್ತು, ಸ್ಕೂಡೆಂಟ್ ಫೆಡರೇಶನ್ ಆಫ್ ಇಂಡಿಯಾ (ಎಸ್ಎಫ್‌ಐ), ಆಡಳಿತಾರೂಢ ಸಿಪಿಐ(ಎಂ)ನ ವಿದ್ಯಾರ್ಥಿಗಳ ವಿಭಾಗ ಮತ್ತು ಇತರರು ಈ ರೀತಿಯ ತರಗತಿಗಳನ್ನು ತೀವ್ರವಾಗಿ ಟೀಕಿಸಿದ್ದಾರೆ. ಇಸ್ಲಾಮಿಕ್ ದೃಷ್ಟಿಕೋನದಿಂದ ಅರ್ಥಮಾಡಿಕೊಳ್ಳುವುದು ಎಂಬ ವಿಷಯದ ಕುರಿತು ಇಸ್ಲಾಮಿಸ್ಟ್ ಗುಂಪು – ಮುಜಾಹಿದ್ ವಿಸ್ಟಮ್ ಇಸ್ಲಾಮಿಕ್ ಆರ್ಗನೈಸೇಶನ್ ತರಗತಿಗಳನ್ನು ನಡೆಸಿದೆ. ತರಗತಿ ನಡೆಸಿದ ಗ್ರೂಪ್‌ನ ಪದಾಧಿಕಾರಿಯೊಬ್ಬರು ಅದರ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ನಂತರ ಇದು ಬೆಳಕಿಗೆ ಬಂದಿದೆ. ಎರಡು ಲಿಂಗಗಳನ್ನು ಪ್ರತ್ಯೇಕಿಸಲು ಅವರು ಬಯಸಿದಂತೆ ಪರದೆಯನ್ನು ಹಾಕಬಹುದು ಎಂಬ ಅಭಿಪ್ರಾಯವನ್ನು ಹೊಂದಿರುವ ಗುಂಪು ತರಗತಿಗಳ ವೆಚ್ಚವನ್ನು ಭರಿಸುತ್ತಿದೆ ಎಂದು ಪದಾಧಿಕಾರಿಗಳು ಹೇಳಿದ್ದಾರೆ.

ಖಾಸಗಿ ಜಾಗದಲ್ಲಿ ತರಗತಿಗಳು ನಡೆಯುತ್ತಿವೆ ಎಂದು ಸಮರ್ಥಿಸಿಕೊಳ್ಳಲಾಗಿದ್ದು, ಉನ್ನತ ಶಿಕ್ಷಣ ಪಡೆದ ವಿದ್ಯಾರ್ಥಿಗಳು ತರಗತಿಗಳಲ್ಲಿ ಪಾಲ್ಗೊಳ್ಳುತ್ತಿರುವುದು ಕಳವಳಕಾರಿ ಸಂಗತಿ ಎಂದು ಎಸ್ಎಫ್‌ಐ ರಾಜ್ಯಾಧ್ಯಕ್ಷೆ ಅನುಶ್ರೀ ಪಿಟಿಐಗೆ ಹೇಳಿಕೆ ನೀಡಿದ್ದಾರೆ. “ಉನ್ನತ ಶೈಕ್ಷಣಿಕ ಅರ್ಹತೆ ಹೊಂದಿರುವ ವಿದ್ಯಾರ್ಥಿಗಳು ಇಂತಹ ಅಭಿಯಾನಗಳ ಭಾಗವಾಗುತ್ತಿರುವುದು ಕಳವಳಕಾರಿ ವಿಷಯವಾಗಿದೆ. ಎಸ್ಎಫ್‌ಐ ಇದನ್ನು ದೊಡ್ಡ ಸವಾಲಾಗಿ ಪರಿಗಣಿಸುತ್ತದೆ ಎಂದು ಅನುಶ್ರೀ ಹೇಳಿದ್ದಾರೆ.

- Advertisement -
spot_img

Latest News

error: Content is protected !!