Wednesday, June 24, 2026
Homeಕರಾವಳಿಮಂಗಳೂರುಮಂಗಳೂರು: ಅಪಘಾತವಾದರೂ ನಿಲ್ಲಿಸದೇ ಪರಾರಿಯಾದ ಸ್ಕಾರ್ಪಿಯೋ ಚಾಲಕ:ಅಪಘಾತ ನೋಡಿದರೂ ಸಹಾಯಕ್ಕೆ ಬರದ ಎರಡು ಕಾರು ಚಾಲಕರು

ಮಂಗಳೂರು: ಅಪಘಾತವಾದರೂ ನಿಲ್ಲಿಸದೇ ಪರಾರಿಯಾದ ಸ್ಕಾರ್ಪಿಯೋ ಚಾಲಕ:ಅಪಘಾತ ನೋಡಿದರೂ ಸಹಾಯಕ್ಕೆ ಬರದ ಎರಡು ಕಾರು ಚಾಲಕರು

- Advertisement -
- Advertisement -

ಮಂಗಳೂರು: ಮಧ್ಯರಾತ್ರಿ ಅಪಘಾತ ಸಂಭವಿಸಿದರೂ ನಿಲ್ಲಿಸದೇ ಸ್ಕಾರ್ಪಿಯೋ ಕಾರು ಚಾಲಕ ಪರಾರಿಯಾದ ಘಟನೆ ಯೆಯ್ಯಾಡಿಯಲ್ಲಿ ನಡೆದಿದೆ.

ಯೆಯ್ಯಾಡಿಯಲ್ಲಿ ಸ್ಕಾರ್ಪಿಯೋ ತಿರುವು ತೆಗೆದುಕೊಳ್ಳುತ್ತಿದ್ದ ವೇಳೆ ಹಿಂದಿನಿಂದ ಬಂದ ಬೈಕ್ ಡಿಕ್ಕಿ ಹೊಡೆದು ಬೈಕ್ ಸವಾರ ಬೊಂದೇಲ್ ನಿವಾಸಿ ಅಲಿಸ್ಟರ್ ತೌರೋ ರಸ್ತೆಗೆ ಬಿದ್ದಿದ್ದರು.

ಬೈಕ್ ಸವಾರ ಗಾಯಗೊಂಡು ರಸ್ತೆಯಲ್ಲಿ ಒದ್ದಾಡುತ್ತಿದ್ದರೂ ಅಪಘಾತ ನೋಡಿದ ಹಿಂದಿನಿಂದ ಬಂದ ಎರಡು ಕಾರು ಚಾಲಕರು ಕೂಡಾ ನಿಲ್ಲಿಸದೇ ತೆರಳಿದ್ದಾರೆ.

ಡೆಕೋರೇಟರ್ ಆಗಿ ಕೆಲಸ ಮಾಡುತ್ತಿರುವ ಬೈಕ್ ಸವಾರ ಅಲಿಸ್ಟರ್ ಕೆಲಸ ಮುಗಿಸಿ ವಾಪಾಸಾಗುತ್ತಿದ್ದ ವೇಳೆ ಅಪಘಾತ ಸಂಭವಿಸಿತ್ತು.

ಕದ್ರಿ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಪಘಾತ ಸಂಭವಿಸಿದ್ದು, ಸ್ಕಾರ್ಪಿಯೋ ಕಾರು ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

- Advertisement -

Latest News

error: Content is protected !!