ಬಂಟ್ವಾಳ: ಅಕ್ಕಪಕ್ಕದ ಮನೆಯ ಯುವಕ ಯುವತಿ ಒಂದೇ ದಿನ ನಾಪತ್ತೆಯಾಗಿರುವ ಘಟನೆ ಬಂಟ್ವಾಳದಲ್ಲಿ ನಡೆದಿದೆ.
ಸಜೀಪ ಮುನ್ನೂರು ಗ್ರಾಮದ ಉದ್ದೊಟ್ಟು ನಿವಾಸಿ ಅಬ್ದುಲ್ ಹಮೀದ್ ಅವರ ಮಗಳು ಆಯಿಸತ್ ರಸ್ಮಾ (18) ಮತ್ತು ಹೈದರ್ ಎಂಬವರ ಮಗ ಮಹಮ್ಮದ್ ಸಿನಾನ್ (23) ನಾಪತ್ತೆಯಾದವರು.ದೇರಳಕಟ್ಟೆಯ ನಡುಪದವು ಪಿ.ಎ.ಕಾಲೇಜಿನಲ್ಲಿ ಫಾರ್ಮಸಿ ವಿಭಾಗದ ಪ್ರಥಮ ವರ್ಷದ ವಿದ್ಯಾರ್ಥಿನಿಯಾಗಿದ್ದು ಒಂದು ವಾರಗಳ ಕಾಲ ರಜೆಯಿದ್ದ ಕಾರಣ ಈಕೆ ಮನೆಯಲ್ಲಿದ್ದಳು.ನ.23 ರಾತ್ರಿ ಮನೆಯವರ ಜೊತೆ ಮಲಗಿದ್ದ ಈಕೆ ಬೆಳಿಗ್ಗೆ ಎದ್ದು ನೋಡುವಾಗ ಅವಳುಮಲಗಿದ್ದ ಕೋಣೆಯಲ್ಲಿರದೆ ಕಾಣೆಯಾಗಿದ್ದಾಳೆ ಎನ್ನಲಾಗಿದೆ. ಇನ್ನು ಸಿನಾನ್ ಕೆಲ ವರ್ಷಗಳ ಕಾಲ ವಿದೇಶದಲ್ಲಿ ಉದ್ಯೋಗ ಮಾಡಿಕೊಂಡಿದ್ದ ಇತ್ತೀಚೆಗೆ ಮರಳಿ ಊರಿಗೆ ಬಂದಿದ್ದು, ಕೂಲಿ ಕೆಲಸ ಮಾಡಿಕೊಂಡಿದ್ದ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ. ಈತ ಕೂಡ ನ.22. ರಂದು ಮನೆಯವರ ಜೊತೆಗೆ ಮಲಗಿದ್ದು, ಮರು ದಿನ ಅಂದರೆ ನ.23.ರಂದು ಬೆಳಿಗ್ಗೆ ಎದ್ದು ನೋಡುವಾಗ ಮನೆಯಲ್ಲಿರದೆ ಕಾಣೆಯಾಗಿರುವ ಬಗ್ಗೆ ದೂರಿನಲ್ಲಿ ತಿಳಿಸಲಾಗಿದೆ.ಇನ್ನು ಇವರಿಬ್ಬರು ಅಕ್ಕಪಕ್ಕದ ಮನೆಯವರಾಗಿದ್ದು, ಪ್ರೀತಿಸುತ್ತಿದ್ದು ಜೊತೆಯಾಗಿಯೇ ಹೋಗಿದ್ದಾರೆ ಎಂದು ಶಂಕಿಸಲಾಗಿದೆ. ಎರಡು ಮನೆಯವರ ಪೋಷಕರು ಕಾಣೆಯಾದ ಇಬ್ಬರನ್ನು ಹುಡುಕಿಕೊಡುವಂತೆ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.