ಬೆಳ್ತಂಗಡಿ : ಲಾರಿ ಚಾಲಕ ನಿರ್ಲಕ್ಷ್ಯತನದ ಚಾಲನೆಯಿಂದ ಬೈಕ್ ಗೆ ಡಿಕ್ಕಿ ಹೊಡೆದು ಇಬ್ಬರ ಸಾವಿಗೆ ಕಾರಣವಾದ ಲಾರಿ ಚಾಲಕನಿಗೆ 20,000 ಸಾವಿರ ದಂಡ ಹಾಗೂ ಎರಡು ವರ್ಷ ಒಂದು ತಿಂಗಳ ಜೈಲು ಶಿಕ್ಷೆ ಪ್ರಕಟ ಮಾಡಿ ಬೆಳ್ತಂಗಡಿ ನ್ಯಾಯಾಲಯ ಆದೇಶ ಮಾಡಿದೆ.
ಘಟನೆ ವಿವರ: ದಿನಾಂಕ 17-01-2022 ರಂದು KA-21-K-9502 ಸಂಖ್ಯೆಯ ಮೋಟಾರ್ ಸೈಕಲ್ ನಲ್ಲಿ ಸವಾರ ಮಿಸ್ಸಾವುದ್ದೀನ್ ಎಂಬುವರು ಸಹ ಸವಾರನಾಗಿ ಅಸ್ಮಾನ್ ಎಂಬವರನ್ನು ಕುಳ್ಳಿರಿಸಿಕೊಂಡು ಮಡಂತ್ಯಾರು ಕಡೆಯಿಂದ ಗುರುವಾಯನಕೆರೆ ಕಡೆಗೆ ಸವಾರಿ ಮಾಡಿಕೊಂಡು ಬರುತ್ತಾ ಸಮಯ ಸುಮಾರು ರಾತ್ರಿ 8:30 ಗಂಟೆಗೆ ಬೆಳ್ತಂಗಡಿ ತಾಲೂಕು ಕುವೆಟ್ಟು ಗ್ರಾಮದ ಮದ್ದಡ್ಡ M M ಕಾಂಪ್ಲೆಕ್ಸ್ ಬಳಿ ತಲುಪುತ್ತಿದ್ದಂತೆ ವಿರುದ್ಧ ದಿಕ್ಕಿನಿಂದ ಅಂದರೆ ಗುರುವಾಯನಕೆರೆ ಕಡೆಯಿಂದ ಮಡಂತ್ಯಾರು ಕಡೆಗೆ KA-20-B-7574 ಸಂಖ್ಯೆಯ ಈಚರ್ ಲಾರಿಯನ್ನು ಅದರ ಚಾಲಕ ದುಡುಕುತನದಿಂದ ಚಲಾಯಿಸಿಕೊಂಡು ಬಂದು ಮೋಟಾರ್ ಸೈಕಲ್ ಗೆ ಡಿಕ್ಕಿ ಹೊಡೆದ ಪರಿಣಾಮ ಮೋಟಾರ್ ಸೈಕಲ್ ಸವಾರ ಮಿಸ್ಸಾವುದ್ದಿನ್ ರವರು ತಲೆಗೆ, ಮುಖಕ್ಕೆ,ಬಲಕೈ ಗೆ, ಬಲಕಾಲಿಗೆ ತೀವ್ರ ಸ್ವರೂಪದ ಗಾಯ ಹಾಗೂ ಸಹ ಸವಾರ ಅಸ್ಮಾನ್ ರವರು ತಲೆಗೆ, ಮೈ ಕೈಗೆ ತೀವು ಸ್ವರೂಪದ ಗಾಯಗೊಂಡವರನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಸಾಗಿಸಿದ್ದು. ವೈದ್ಯರು ಎರಡೂ ಗಾಯಾಳುಗಳನ್ನು ಪರೀಕ್ಷಿಸಿದಾಗ ಇಬ್ಬರೂ ಗಾಯಾಳುಗಳು ಮೃತಪಟ್ಟಿದ್ದರು. ಈ ಬಗ್ಗೆ ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣೆಯಲ್ಲಿ U/s 279,304(A) IPC & Sec 5(1) r/w 180 IMV ಅಡಿಯಲ್ಲಿ ಪ್ರಕರಣ ದಾಖಲಿಸಿ ಬೆಳ್ತಂಗಡಿ ನ್ಯಾಯಾಲಯಕ್ಕೆ ಪೊಲೀಸರು ದೋಷರೋಷ ಪಟ್ಟಿಯನ್ನು ಸಲ್ಲಿಸಿದ್ದರು.ಪ್ರಕರಣವು ಬೆಳ್ತಂಗಡಿ ಮಾನ್ಯ Prl C J & JMFC ನ್ಯಾಯಾಲಯದಲ್ಲಿ ವಿಚಾರಣೆಯಾಗಿ ನವೆಂಬರ್ 25 ರಂದು A1 ಆರೋಪಿ ಮಹಮ್ಮದ್ ಸಿನಾನ್ ಎಂಬಾತನ ಅಪಘಾತ ಪ್ರಕರಣ ಆರೋಪ ಸಾಭಿತಾಗಿದ್ದು ಆರೋಪಿಗೆ ನ್ಯಾಯಾಲಯವು ದಂಡ ಹಾಗೂ ಶಿಕ್ಷೆ ಪ್ರಕಟ ಮಾಡಿದೆ.
ದಂಡ ಹಾಗೂ ಶಿಕ್ಷೆ ಪ್ರಮಾಣ: U/s 279 IPC ಗೆ 1 ತಿಂಗಳ ಕಾರಾಗೃಹ ವಾಸ ಮತ್ತು 1,000 ರೂಪಾಯಿ ದಂಡ ಮತ್ತು ಕಲಂ 304(A) IPC ಗೇ ಎರಡು ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಮತ್ತು 1,000 ರೂಪಾಯಿ ದಂಡ, ದಂಡ ಕಟ್ಟಲು ತಪ್ಪಿದಲ್ಲಿ 1 ತಿಂಗಳ ಕಾರಾಗೃಹ ಶಿಕ್ಷೆಯನ್ನು ನ.25 ರಂದು ವಿಧಿಸಿ ಆದೇಶಿಸಿ ಆದೇಶ ಮಾಡಿದೆ.
ಪ್ರಕರಣದ ತನಿಖಾಧಿಕಾರಿಗಳು: ಪ್ರಕರಣದ ಎಫ್ಐಆರ್ ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣೆಯಲ್ಲಿದ್ದ ಸಬ್ ಇನ್ಸ್ಪೆಕ್ಟರ್ ಅಗಿದ್ದ ಓಡಿಯಪ್ಪ ಗೌಡ ಮಾಡಿದ್ದು.ಪ್ರಕರಣದ ತನಿಖಾಧಿಕಾರಿಯಾಗಿ ನ್ಯಾಯಾಲಯಕ್ಕೆ ದೋಷರೋಪ ಪಟ್ಟಿಯನ್ನು ಬೆಳ್ತಂಗಡಿ ಸರ್ಕಲ್ ಇನ್ಸ್ಪೆಕ್ಟರ್ ಅಗಿದ್ದ ಶಿವಕುಮಾರ್ ಮಾಡಿದ್ದರು. ಇವರಿಗೆ ಸಹಾಯಕರಾಗಿ ಸಂಚಾರಿ ಪೊಲೀಸ್ ಠಾಣೆಯ ಎಎಸ್ಐ ರಾಮಚಂದ್ರ ಕರ್ತವ್ಯ ನಿರ್ವಹಿಸಿದ್ದರು.