Wednesday, June 3, 2026
Homeಕರಾವಳಿಮಂಗಳೂರು: ರಸ್ತೆಗುಂಡಿಯಿಂದಾಗಿ ಪ್ರಾಣ ತೆತ್ತ ಬೈಕ್ ಸವಾರ

ಮಂಗಳೂರು: ರಸ್ತೆಗುಂಡಿಯಿಂದಾಗಿ ಪ್ರಾಣ ತೆತ್ತ ಬೈಕ್ ಸವಾರ

- Advertisement -
- Advertisement -

ಮಂಗಳೂರು: ರಸ್ತೆಗುಂಡಿಯಿಂದಾಗಿ ಬೈಕ್ ಸವಾರ ಪ್ರಾಣ ತೆತ್ತ ಘಟನೆ ಮಂಗಳೂರಿನ ಸುರತ್ಕಲ್ ಸಮೀಪದ ಬೈಕಂಪಾಡಿಯಲ್ಲಿ ನಡೆದಿದೆ.

ಮಂಗಳೂರು: ನೋಡನೋಡುತ್ತಿದ್ದಂತೆ ಬೈಕ್ ಸವಾರನ ಮೇಲೆ ಲಾರಿಯೊಂದು ಹರಿದಿರುವ ಘಟನೆ ಮಂಗಳೂರಿನ ಸುರತ್ಕಲ್ ಸಮೀಪದ ಬೈಕಂಪ್ಪಾಡಿಯಲ್ಲಿ ನಡೆದಿದೆ. ತೋಕೂರು ನಿವಾಸಿ ಟೈಟಸ್‌ ಫೆರಾವೊ (60) ಮೃತ ದುರ್ದೈವಿ.

ಟೈಟಸ್‌ ಅವರು ಸ್ಕೂಟರ್‌ ನಲ್ಲಿ ಪಣಂಬೂರು ಕಡೆಗೆ ಹೋಗುತ್ತಿದ್ದಾಗ ರಸ್ತೆಯಲ್ಲಿ ಹೊಂಡ ಇದ್ದ ಕಾರಣ ಸ್ಕೂಟರ್ ನಿಧಾನ ಮಾಡಿದ್ದಾರೆ. ಆಗ  ಹಿಂಬದಿಯಿಂದ ವೇಗವಾಗಿ ಬಂದ ಸರಕು ತುಂಬಿದ ಲಾರಿ ಸ್ಕೂಟರ್‌ ಗೆ ಢಿಕ್ಕಿ ಹೊಡೆದಿದೆ.

ಬಳಿಕ ಸ್ಕೂಟರ್‌ ಮತ್ತು ಸವಾರ ಟೈಟಸ್‌ ಅವರನ್ನು ಲಾರಿ ಸುಮಾರು 100 ಅಡಿ ದೂರಕ್ಕೆ ಎಳೆದುಕೊಂಡು ಹೋಗಿದೆ. ಇದರ ಪರಿಣಾಮವಾಗಿ ಸವಾರ ಟೈಟಸ್‌ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.ಮಂಗಳೂರು ನಗರ ಉತ್ತರ ಟ್ರಾಫಿಕ್‌ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ದೂರು ದಾಖಲಿಸಿಕೊಂಡಿದ್ದಾರೆ.

- Advertisement -

Latest News

error: Content is protected !!