Thursday, June 25, 2026
Homeಕರಾವಳಿಎಡಪದವು; ಅಮೂಲ್ಯ "ಹಣಕಾಸು ಸಾಕ್ಷರತಾ ಕಾರ್ಯಕ್ರಮ

ಎಡಪದವು; ಅಮೂಲ್ಯ “ಹಣಕಾಸು ಸಾಕ್ಷರತಾ ಕಾರ್ಯಕ್ರಮ

- Advertisement -
- Advertisement -

ಎಡಪದವು; ಡಾ.ಪಿ ದಯಾನಂದ ಪೈ ಪಿ.ಸತೀಶ್ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ರಥಬೀದಿ ಮಂಗಳೂರು ಇದರ ಸಮಾಜಕಾರ್ಯ ವಿಭಾಗ ಇದರ ವತಿಯಿಂದ ಸ್ವ ಸಹಾಯ ಸಂಘಗಳ ಸದಸ್ಯರಿಗೆ ಹಣಕಾಸು ಸಾಕ್ಷರತಾ ಕಾರ್ಯಕ್ರಮವನ್ನು  ಎಡಪದವು ಸ್ತ್ರೀ ಶಕ್ತಿ ಭವನ ಇಲ್ಲಿ ಆಯೋಜಿಸಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಶೋಕ್ ವ್ಯವಸ್ಥಾಪಕರು ಸಂಜೀವಿನಿ ಮಂಗಳೂರು ತಾಲೂಕು ಪಂಚಾಯತ್ ವಹಿಸಿ ಜೀವನಮಟ್ಟ ಸುಧಾರಣೆಗೆ ಆರ್ಥಿಕ ಸಾಕ್ಷರತೆ ಬಹಳ ಉಪಯುಕ್ತ ,ಹಣಕಾಸು ಸಂಸ್ಥೆಗಳ ಸೇವಾ ಸೌಲಭ್ಯಗಳ ಮಾಹಿತಿ ನಮ್ಮನ್ನು ಯಶಸ್ಸಿನ ಹಾದಿಯಲ್ಲಿ ನಡೆಸುತ್ತದೆ ಎಂದು ಕಾರ್ಯಕ್ರಮವನ್ನು ಆಯೋಜಿಸಿದ ಸಮಾಜಕಾರ್ಯ ವಿಭಾಗದ ವಿದ್ಯಾರ್ಥಿಗಳಿಗೆ ಅಭಿನಂದಿಸಿದರು.

ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಲತೇಶ್.ಬಿ ಆರ್ಥಿಕ ಸಮಾಲೋಚಕರು, ಆರ್ಥಿಕ ಸಾಕ್ಷರತಾ ಕೇಂದ್ರ ಅಮೂಲ್ಯ, ಮಂಗಳೂರು ಇವರು ಉಳಿತಾಯ, ಹಣಕಾಸು ಯೋಜನೆ, ವಿವಿಧ ಬಗೆಯ ಖಾತೆಗಳು, ಭಾರತ ಸರ್ಕಾರದ ಸಾಮಾಜಿಕ ಭದ್ರತಾ ಯೋಜನೆಗಳಾದ ಪ್ರಧಾನ ಮಂತ್ರಿ ಸುರಕ್ಷಾ ವಿಮಾ ಯೋಜನೆ, ಪ್ರಧಾನ ಮಂತ್ರಿ ಜೀವನ ಜ್ಯೋತಿ ವಿಮಾ ಯೋಜನೆ , ವಿವಿಧ ಸ್ವಂತ ಉದ್ದಿಮೆಗೆ ಲಭ್ಯ ಇರುವ ಸಾಲ ಸೌಲಭ್ಯ, ಡಿಜಿಟಲ್ ವ್ಯವಹಾರ ಮತ್ತು ಸುರಕ್ಷಿತ ಡಿಜಿಟಲ್ ವ್ಯವಹಾರ ಕ್ರಮಗಳು, ಎನ್ ಪಿ ಸಿ ಐ ಲಿಂಕ್ ಕುರಿತು ಮಾಹಿತಿ ನೀಡಿದರು.ಕಾರ್ಯಕ್ರಮದ ಉದ್ಘಾಟಕರಾಗಿ ಜೀವನ್ ಕೊಲ್ಯ , ವ್ಯವಸ್ಥಾಪಕರು ಭಾರತೀಯ ವಿಕಾಸ ಟ್ರಸ್ಟ್ ಭಾಗವಹಿಸಿ ಶುಭ ಹಾರೈಸಿದರು,ಅತಿಥಿಗಳಾಗಿ ಯಶೋಧಾ , ಕೃಷಿ ಸಖಿ ಸಂಜೀವಿನಿ. ವಸಂತಿ , ಏಫ್ ಎಲ್ ಸಿ ಆರ್ ಪಿ ಉಪಸ್ಥಿತರಿದ್ದರು , ಕಾರ್ಯಕ್ರಮದಲ್ಲಿ ಸಮಾಜಕಾರ್ಯ ವಿಭಾಗ ವಿದ್ಯಾರ್ಥಿನಿಯರಾದ  ಕು.ರಕ್ಷಾ ಸ್ವಾಗತಿಸಿದರು, ಕು.ನಿವೇದಿತಾ ವಂದಿಸಿದರು , ಕಾರ್ಯಕ್ರಮದ ನಿರೂಪಣೆಯನ್ನು ಕು.ದಾಕ್ಷಾಯಿಣಿ ನಡೆಸಿದರು.

- Advertisement -

Latest News

error: Content is protected !!