- Advertisement -
![]()
- Advertisement -
ಕಡಬ ; ಶಾಲೆಯಿಂದ ಮನೆಗೆ ತೆರಳಲು ಬಸ್ ಏರಿದ ವಿದ್ಯಾರ್ಥಿನಿ ತನ್ನ ಸ್ಟಾಪ್ ನಲ್ಲಿ ಇಳಿಯದೆ ನಾಪತ್ತೆಯಾಗಿ ಬಳಿಕ ಬಿಳಿನೆಲೆ ಸಮೀಪ ಪತ್ತೆಯಾದ ಘಟನೆ ನಿನ್ನೆ ಸಂಜೆ ಕಡಬದ ಹೊಸ್ಮಠದಲ್ಲಿ ನಡೆದಿದೆ.
ಕಡಬ ತಾಲೂಕಿನ ಅಲಂಕಾರು ಭಾರತಿ ಶಾಲೆಯ 6 ನೇ ತರಗತಿ ವಿದ್ಯಾರ್ಥಿನಿ ವಿದೀಶ ಶಾಲೆ ಬಿಟ್ಟ ಬಳಿಕ ಮನೆಗೆ ತೆರಳಲು ಸರ್ಕಾರಿ ಬಸ್ ಏರಿದ್ದಾಳೆ. ಆದರೆ ತನ್ನ ನಿಲುಗಡೆ ಬಂದಾಗ ಬಲ್ಯ ಹೊಸ್ಮಠದಲ್ಲಿ ಇಳಿಯದೆ ಮುಂದಕ್ಕೆ ಹೋಗಿ ಸಾಯಂಕಾಲದವರೆಗೆ ನಾಪತ್ತೆಯಾಗಿದ್ದಳು.
ಮನೆಯವರು,ಕುಟುಂಬಸ್ಥರು ಹುಡುಕಾಟ ನಡೆಸಿದರೂ ಪತ್ತೆಯಾಗದ ಹಿನ್ನೆಲೆಯಲ್ಲಿ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ಅಲ್ಲದೆ ಸಾಮಾಜಿಕ ಜಾಲತಾಣದಲ್ಲಿ ನಾಪತ್ತೆಯಾಗಿರುವ ಬಗ್ಗೆ ಸಂದೇಶ ರವಾನಿಸಿ ಸಹಕರಿಸಲು ಮನವಿ ಮಾಡಲಾಗಿತ್ತು. ಬಳಿಕ ಪೊಲೀಸರು ಬಾಲಕಿಯನ್ನು ಬಿಳಿನೆಲೆ ಬಳಿ ಪತ್ತೆ ಹಚ್ಚಿ ಠಾಣೆಗೆ ಕರೆ ತಂದು ಪೋಷಕರ ಜೊತೆ ಕಳುಹಿಸಿರುವುದಾಗಿ ತಿಳಿದು ಬಂದಿದೆ.
- Advertisement -


