Wednesday, June 3, 2026
HomeUncategorizedಎಸ್.ಡಿ.ಎಂ ಕಾಲೇಜು ಉಜಿರೆಯ ಕಲಾ ಕೇಂದ್ರದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ

ಎಸ್.ಡಿ.ಎಂ ಕಾಲೇಜು ಉಜಿರೆಯ ಕಲಾ ಕೇಂದ್ರದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ

- Advertisement -
- Advertisement -

ಉಜಿರೆ : ಎಸ್.ಡಿ.ಎಂ ಕಲಾಕೇಂದ್ರದ ಕಲಾವೈಭವ ತಂಡವು ಈ ವರ್ಷ ಸುಮಾರು 20 ಕ್ಕೂ ಹೆಚ್ಚು ರಾಜ್ಯದ ವಿವಿಧ ಕಡೆಗಳಲ್ಲಿ ಯಶಸ್ವಿ ಪ್ರದರ್ಶನ ನೀಡಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಈ ವರ್ಷದಿಂದ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರೊತ್ಸಾಹಕವಾಗಿ ವಿದ್ಯಾರ್ಥಿ ವೇತನವನ್ನು ನೀಡುವುದಾಗಿ ಆಡಳಿತ ಮಂಡಳಿ ನಿರ್ಧರಿಸಿದ್ದು, ಇದರ ಸಲುವಾಗಿ ಕಲಾ ಕೇಂದ್ರದ ನೃತ್ಯ, ಯಕ್ಷಗಾನ ಹಾಗೂ ರಂಗ ತರಬೇತಿಯ 2025-26ರ ವಿದ್ಯಾರ್ಥಿಗಳಿಗೆ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಯ ವತಿಯಿಂದ ಸುಮಾರು 4.5 ಲಕ್ಷದ ವಿದ್ಯಾರ್ಥಿ ವೇತನ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಸೋನಿಯಾ ಯಶೋವರ್ಮ, ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ವಿಶ್ವನಾಥ ಪಿ., ಕಲಾ ಕೇಂದ್ರದ ಸಂಯೋಜಕರಾದ ತೃಪ್ತ ಕುಮಾರ್ ಜೈನ್, ಡಾ.ನಾಗಣ್ಣ ಡಿ. ಎ ಹಾಗೂ ತರಬೇತುದಾರರು ಉಪಸ್ಥಿತರಿದ್ದರು.

- Advertisement -

Latest News

error: Content is protected !!