Thursday, July 16, 2026
Homeತಾಜಾ ಸುದ್ದಿಸ್ಯಾಂಟ್ರೋ ರವಿಯನ್ನು ಜ.30 ವರೆಗೆ ಸಿಐಡಿ ವಶಕ್ಕೆ ನೀಡಿ;ಕೋರ್ಟ್ ಆದೇಶ

ಸ್ಯಾಂಟ್ರೋ ರವಿಯನ್ನು ಜ.30 ವರೆಗೆ ಸಿಐಡಿ ವಶಕ್ಕೆ ನೀಡಿ;ಕೋರ್ಟ್ ಆದೇಶ

- Advertisement -
- Advertisement -

ಮೈಸೂರು : ವಂಚನೆದಲ್ಲಿ ಬಂಧಿತನಾಗಿರುವ ಸ್ಯಾಂಟ್ರೋ ರವಿಯನ್ನು ಜ.30 ರವರೆಗೆ ಸಿಐಡಿ ವಶಕ್ಕೆ ನೀಡಿ ಆದೇಶ ಹೊರಡಿಸಿದೆ.ಸ್ಯಾಂಟ್ರೋ ರವಿ ಪ್ರಕರಣಗಳ ತನಿಖೆಯನ್ನು ರಾಜ್ಯ ಸರ್ಕಾರ ಸಿಐಡಿಗೆ ವಹಿಸಿರುವುದರಿಂದ ಮೈಸೂರಿನ 6ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯವು ಸ್ಯಾಂಟ್ರೋ ರವಿಯನ್ನು ಜ.30 ರವರೆಗೆ ಸಿಐಡಿ ಕಸ್ಟಡಿಗೆ ಒಪ್ಪಿಸಿ ಆದೇಶಿಸಿದೆ.

ಕಸ್ಟಡಿಗೆ ನೀಡುವಂತೆ ಮೈಸೂರು ಕೋರ್ಟ್ಗೆ ಇಂದು ಸಿಐಡಿ ಅರ್ಜಿ ಸಲ್ಲಿಸಿದ್ದು, ಮೈಸೂರು ಕೇಂದ್ರ ಕಾರಾಗೃಹದಲ್ಲಿರುವ ‘ಸ್ಯಾಂಟ್ರೋ’ ರವಿಯನ್ನು ಕೋರ್ಟ್ ಜ.30 ರವರೆಗೆ ವರೆಗೆ ನೀಡಿ ಆದೇಶ ಹೊರಡಿಸಿದೆ.

ಇನ್ನೂ, ಸ್ಯಾಂಟ್ರೋ ರವಿ ವಿರುದ್ಧ ಇದೀಗ ಮೈಸೂರಿನ ದೇವರಾಜ ನಗರ ಠಾಣೆಯಲ್ಲಿ ಮತ್ತೊಂದು ದೂರು ದಾಖಲಾಗಿದೆ.ಸ್ಯಾಂಟ್ರೋ ರವಿ ಪತ್ನಿ ಎನ್ನಲಾದ ಮಹಿಳೆಯಿಂದ ದೇವರಾಜ ಠಾಣೆಯಲ್ಲಿ ದೂರು ದಾಖಲಾಗಿದೆ. ಚೆಕ್ ಬುಕ್ ದುರುಪಯೋಗ ಮಾಡಿಕೊಂಡ ಬಗ್ಗೆ ಮಹಿಳೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಸ್ಯಾಂಟ್ರೋ ರವಿ, ಪ್ರಕಾಶ್ ಎನ್ನುವವರು ನನ್ನ ಚೆಕ್ ಬುಕ್ ಕಳ್ಳತನ ಮಾಡಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ.

- Advertisement -

Latest News

error: Content is protected !!