- Advertisement -
![]()
- Advertisement -
ಬೆಳಗಾವಿ: ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆ ಚುರುಕುಗೊಂಡಿದ್ದು , ಉಡುಪಿಯಿಂದ ನಿನ್ನೆ ರಾತ್ರಿ ಬೆಳಗಾವಿಗೆ ಒಂದು ಟೀಮ್ ಆಗಮಿಸಿದೆ.
ಅಧಿಕೃತವಾಗಿ ಮೃತ ಸಂತೋಷ ನಿವಾಸಕ್ಕೆ ಭೇಟಿ ನೀಡದ ಪೊಲೀಸರು, ಸದ್ಯ ಮಫ್ತಿಯಲ್ಲಿ ಇಂಚಿಂಚೂ ಮಾಹಿತಿ ಕಲೆ ಹಾಕುತ್ತಿದ್ದಾರೆ. ಮೃತ ಸಂತೋಷ ಕುರಿತು ಆರು ಜನರ ತಂಡ ಮಾಹಿತಿ ಕಲೆಹಾಕುತ್ತಿದೆ. ಸಂತೋಷ್ ಪಾಟೀಲ್ ಹುಟ್ಟೂರು ಬೆಳಗಾವಿ ತಾಲೂಕಿನ ಬಡಸ ಗ್ರಾಮದಲ್ಲಿ ಮಫ್ತಿಯಲ್ಲಿ ಇಬ್ಬರು ಪೊಲೀಸರ ರೌಂಡ್ಸ್ ಹಾಕುತ್ತಿದ್ದರೆ, ವಿಜಯನಗರದಲ್ಲಿಯೂ ಕಾಲೋನಿಯ ಜನರಿಂದ ಮಫ್ತಿಯಲ್ಲಿ ಮಾಹಿತಿ ಕಲೆ ಹಾಕುತ್ತಿದ್ದಾರೆ ಪೊಲೀಸರು.
ಸಂತೋಷ ಪಾಟೀಲ್ ಕಾಮಗಾರಿ ಮಾಡಿದ್ದ ಹಿಂಡಲಗಾ ಗ್ರಾಮಕ್ಕೂ ಇಬ್ಬರು ಪೊಲೀಸರ ಭೇಟಿ ನೀಡಿದ್ದಾರೆ. ಕಾಮಗಾರಿ ನಡೆದ ಸ್ಥಳ ಹಾಗೂ ಗ್ರಾಮಸ್ಥರಿಂದ ಮಾಹಿತಿ ಪೊಲೀಸರು ಮಾಹಿತಿ ಪಡೆಯುತ್ತಿದ್ದಾರೆ.
- Advertisement -


