Saturday, May 4, 2024
Homeಕರಾವಳಿಉಡುಪಿಉಡುಪಿ: ಸಂತೋಷ್ ಪಾಟೀಲ್ ಸಾವಿನ ತನಿಖೆಗೆ ಏಳು ತಂಡ ರಚನೆ: ಎಡಿಜಿಪಿ ಪ್ರತಾಪ್ ರೆಡ್ಡಿ

ಉಡುಪಿ: ಸಂತೋಷ್ ಪಾಟೀಲ್ ಸಾವಿನ ತನಿಖೆಗೆ ಏಳು ತಂಡ ರಚನೆ: ಎಡಿಜಿಪಿ ಪ್ರತಾಪ್ ರೆಡ್ಡಿ

spot_img
- Advertisement -
- Advertisement -

ಉಡುಪಿ: ಸಂತೋಷ್ ಪಾಟೀಲ್ ಪ್ರಕರಣದಲ್ಲಿ ನಿರ್ದೇಶನಗಳನ್ನು ನೀಡಲು ಬಂದಿದ್ದೇನೆ.ಏಳು ತನಿಖಾ ತಂಡಗಳನ್ನು ಮಾಡಿ ರಾಜ್ಯದ ವಿವಿಧ ಭಾಗಗಳಿಗೆ ಕಳುಹಿಸಲಾಗಿದೆ. ತನಿಖೆಯನ್ನು ಸಮರ್ಪಕ ರೀತಿಯಲ್ಲಿ ಮಾಡಲಾಗುವುದು ಎಂದು ಉಡುಪಿಯಲ್ಲಿ ಎಡಿಜಿಪಿ ಪ್ರತಾಪ್ ರೆಡ್ಡಿ ಹೇಳಿದ್ದಾರೆ.

ಉಡುಪಿ ಎಸ್ಪಿ ಕಚೇರಿಯಲ್ಲಿ ಸತತ ನಾಲ್ಕು ಗಂಟೆಗಳ ಕಾಲ ಮೀಟಿಂಗ್ ನಡೆಸಿದ ಬಳಿಕ ಪತ್ರಕರ್ತರ ಜೊತೆ ಮಾತನಾಡಿದರು. ಹಂತಹಂತವಾಗಿ ಪರಿಶೀಲನೆ ನಡೆಸಿ ಮಾಹಿತಿಗಳನ್ನು ನೀಡುತ್ತೇವೆ. ಸಮರ್ಪಕವಾಗಿ ಮತ್ತು ಸಮಗ್ರವಾಗಿ ತನಿಖೆಯನ್ನು ಮಾಡಲಾಗುವುದು. ಸಂತೋಷ್ ಪಾಟೀಲ್ ಮರಣೋತ್ತರ ಪರೀಕ್ಷೆ ವರದಿ, ಎಫ್ ಎಸ್ ಎಲ್,  ಫೊರೆನ್ಸಿಕ್ ಸಾಯನ್ಸ್ ಲ್ಯಾಬೋರೆಟರಿ ವರದಿ ಬರಬೇಕು. ಡಾಕ್ಟರ್ಸ್ ರಿಪೋರ್ಟ್ ಗಳು ಇನ್ನೂ ಬರಬೇಕಾಗಿದೆ.ಎಲ್ಲಾ ಹಂತದ ವರದಿಗಳನ್ನು ಪರಿಶೀಲನೆ ಮಾಡಬೇಕು. ಮರಣೋತ್ತರ ವರದಿ ಬಗ್ಗೆ ಈ ಹಂತದಲ್ಲಿ ಯಾವುದನ್ನೂ ಹೇಳಲು ಸಾಧ್ಯವಿಲ್ಲ ಎಂದು ಹೇಳಿದರು.

ಎಫ್ ಎಸ್ಎಲ್ ಒಂದು ಒಂದು ಸ್ವತಂತ್ರವಾದ ಸಂಸ್ಥೆ. ಅವರು ಅವರ ವರದಿಗಳನ್ನು ಕೊಡುತ್ತಾರೆ.ಎಫ್ ಎಸ್ ಎಲ್ ವರದಿ ಶೀಘ್ರ ಕೊಡುವಂತೆ ಪೊಲೀಸ್ ಇಲಾಖೆಯಿಂದ ಒತ್ತಾಯಿಸಿದ್ದೇವೆ. ಎಡಿಜಿಪಿ ಆಗಿ ನಾನು ತನಿಖಾ ಅಧಿಕಾರಿಗಳನ್ನು ಮತ್ತು ತಂಡಗಳನ್ನು ಮೇಲುಸ್ತುವಾರಿ ಮಾಡುತ್ತೇನೆ. ನನ್ನ ನಿರ್ದೇಶನದಂತೆ ತನಿಖಾ ತಂಡಗಳು ಕೆಲಸ ಮಾಡುತ್ತವೆ ಎಂದು ಹೇಳಿದರು.

- Advertisement -
spot_img

Latest News

error: Content is protected !!