Thursday, June 4, 2026
Homeತಾಜಾ ಸುದ್ದಿಹುಟ್ಟೂರಿನಲ್ಲಿ ಗುತ್ತಿಗೆದಾರ ಸಂತೋಷ್‌ ಪಾಟೀಲ್‌ ಅಂತ್ಯಕ್ರಿಯೆ

ಹುಟ್ಟೂರಿನಲ್ಲಿ ಗುತ್ತಿಗೆದಾರ ಸಂತೋಷ್‌ ಪಾಟೀಲ್‌ ಅಂತ್ಯಕ್ರಿಯೆ

- Advertisement -
- Advertisement -

ಉಡುಪಿಯ ಶಾಂಭವಿ ಲಾಡ್ಜ್‌ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ಬೆಳಗಾವಿ ಮೂಲದ ಗುತ್ತಿಗೆದಾರ ಸಂತೋಷ್‌ ಪಾಟೀಲ್‌ ಅವರ ಅಂತ್ಯಕ್ತಿಯೆ ಅವರ ಸ್ವಗ್ರಾಮವಾದ ಬೆಳಗಾವಿ ತಾಲೂಕಿನ ಬಡಸದಲ್ಲಿ ನಡೆದಿದೆ.

ಅಂತ್ಯಕ್ರಿಯೆ ಸಂದರ್ಭದಲ್ಲಿ ಬೆಳಗಾವಿ ಗ್ರಾಮೀಣ ಭಾಗದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್‌ ಅವರ ಆಪ್ತ ಅಡವೇಶ ಇಟಗಿ ಹೈಡ್ರಾಮಾ ಮಾಡಿದ್ದು, ಸಚಿವ ಈಶ್ವರಪ್ಪ ಬಂಧನವಾಗುವವರೆಗೂ ಅಂತ್ಯಕ್ರಿಯೆ ಮಾಡುವುದು ಬೇಡವೆಂದು ಪಟ್ಟು ಹಿಡಿದಿದ್ದಾರೆ.

ಆದರೆ ಬಳಿಕ ಗ್ರಾಮಸ್ಥರು ಮನವೊಲಿಸಿ ಅಂತ್ಯಕ್ರಿಯೆ ನೆರವೇರಿಸಿದ್ದಾರೆ. ಈ ಸಂದರ್ಭದಲ್ಲಿ ಸಂತೋಷ್‌ ಪಾಟೀಲ್‌ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.

- Advertisement -

Latest News

error: Content is protected !!