Saturday, May 18, 2024
Homeತಾಜಾ ಸುದ್ದಿಸ್ಯಾಂಡಲ್ ವುಡ್ ನ ಹಿರಿಯ ನಟ ವಿಧಿವಶ

ಸ್ಯಾಂಡಲ್ ವುಡ್ ನ ಹಿರಿಯ ನಟ ವಿಧಿವಶ

spot_img
- Advertisement -
- Advertisement -

ಬೆಂಗಳೂರು : ಸ್ಯಾಂಡಲ್ ವುಡ್ ನ ಹಿರಿಯ ನಟ ಉದಯ್ ಹುತ್ತಿನಗದ್ದೆ (62) ಉಸಿರಾಟದ ಸಮಸ್ಯೆಯಿಂದ ನಿನ್ನೆ ಸಂಜೆ ತಮ್ಮ ಮನೆಯಲ್ಲಿ ನಿಧನರಾಗಿದ್ದಾರೆ.

1987 ರಲ್ಲಿ ಬಿಡುಗಡೆಯಾದ ಆರಂಭ ಸಿನಿಮಾದ ಮೂಲಕ ನಾಯಕನಾಗಿ ಕನ್ನಡ ಚಿತ್ರ ರಂಗಕ್ಕೆ ಎಂಟ್ರಿ ಕೊಟ್ಟ ಅವರು ಶಿವಯೋಗಿ ಅಕ್ಕಮಹಾದೇವಿ,ಅಮೃತ ಬಿಂದು, ಉದ್ಭವ, ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ಉಂಡು ಹೋದ ಕೊಂಡೂ ಹೋದ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದರು.

ನಟನೆಯಿಂದ ದೂರ ಉಳಿದ ಅವರು, ಆನಂದರಾವ್ ವೃತ್ತದ ಬಳಿಕ ಕಲರ್ ಲ್ಯಾಬ್ ನಡೆಸುತ್ತಿದ್ದರು.ಗುರುವಾರ ಸಂಜೆ ಉಸಿರಾಟದ ಸಮಸ್ಯೆಯಿಂದಾಗಿ ತಮ್ಮ ಮನೆಯಲ್ಲೇ ಮೃತಪಟ್ಟಿದ್ದಾರೆ. ಉದಯ್ ಹುತ್ತಿನಗತ್ತೆ ಅವರ ಅಂತಿಮ ಸಂಸ್ಕಾರ ಇಂದು ಮಧ್ಯಾಹ್ನ ಚಾಮರಾಜಪೇಟೆಯ ರುದ್ರಭೂಮಿಯಲ್ಲಿ ನಡೆಯಲಿದೆ.

- Advertisement -
spot_img

Latest News

error: Content is protected !!