Monday, June 8, 2026
Homeಕರಾವಳಿಟ್ವಿಟರ್ ನಲ್ಲಿ ಸುಬ್ರಹ್ಮಣ್ಯ ಹಾಗೂ ಗುಂಡ್ಯ ನಡುವಿನ ರಸ್ತೆ ಫೋಟೋ ಹಂಚಿಕೊಂಡು ಮೆಚ್ಚುಗೆ ವ್ಯಕ್ತಪಡಿಸಿದ ಆನಂದ್...

ಟ್ವಿಟರ್ ನಲ್ಲಿ ಸುಬ್ರಹ್ಮಣ್ಯ ಹಾಗೂ ಗುಂಡ್ಯ ನಡುವಿನ ರಸ್ತೆ ಫೋಟೋ ಹಂಚಿಕೊಂಡು ಮೆಚ್ಚುಗೆ ವ್ಯಕ್ತಪಡಿಸಿದ ಆನಂದ್ ಮಹೀಂದ್ರ

- Advertisement -
- Advertisement -

ಸುಬ್ರಹ್ಮಣ್ಯ: ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಕ್ಟೀವ್ ಆಗಿರುವ ಮಹೀಂದ್ರ ಗ್ರೂಪ್‌ನ ಚೇರ್‌ರ್ಮೆನ್‌ ಆನಂದ್‌ ಮಹೀಂದ್ರ ಆಗಾಗ್ಗೆ ಏನಾದರೊಂದು ಹೊಸ ವಿಚಾರಗಳನ್ನು ಶೇರ್ ಮಾಡುತ್ತಲೇ ಇರುತ್ತಾರೆ. ಇದೀಗ ಆನಂದ್ ಮಹೀಂದ್ರ ಕುಕ್ಕೆ ಸುಬ್ರಹ್ಮಣ್ಯ-ಗುಂಡ್ಯ ನಡುವೆ ಸಾಗುವ ಅರಣ್ಯ ಪ್ರದೇಶದ ಚಿತ್ರವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ವ್ಯಾಪಕ ವೈರಲ್‌ ಆಗಿದೆ. ವಿಸಿಟ್‌ ಉಡುಪಿ ಎಂಬ ಟ್ವಿಟರ್‌ ಖಾತೆಯಲ್ಲಿ ಕೆಲವು ದಿನಗಳ ಹಿಂದೆ ಈ ಫೋಟೋವನ್ನು ಟ್ವೀಟ್‌ ಮಾಡಿದ್ದರು.

ಕುಕ್ಕೆ ಸುಬ್ರಹ್ಮಣ್ಯಕ್ಕೆ ಅರಣ್ಯ ಪ್ರದೇಶ ಮಧ್ಯೆ ಸಾಗುವ ಗುಂಡ್ಯ ಬಳಿಯ ಹೆದ್ದಾರಿಯ ಚಿತ್ರವನ್ನು “ಜಗತ್ತಿನ ಅತ್ಯಂತ ಸುಂದರ ಕಾಡಿನ ಪ್ರಯಾಣ’ ಎಂಬ ಶೀರ್ಷಿಕೆಯಡಿ ಶೇರ್ ಮಾಡಲಾಗಿತ್ತು. ಇದೇ  ಮನೋಹರವಾದ ದೃಶ್ಯವನ್ನು ಆನಂದ್‌ ಮಹೀಂದ್ರಾ ಕೂಡ ಹಂಚಿಕೊಂಡಿದ್ದಾರೆ. ಸುಂದರವಾಗಿ ಡಾಂಬರೀಕರಣಗೊಂಡು ಎರಡು ಬದಿಯಲ್ಲಿ ಬಿಳಿ ಬಣ್ಣದ ಗೆರೆಯನ್ನೂ ಹೊಂದಿರುವ ರಸ್ತೆ ಸವಾರರ ಕನಸಿನ ಮಾರ್ಗ ಎಂದು ಕೆಲವರು ಬಣ್ಣಿಸಿದ್ದಾರೆ. ಈ ಟ್ವೀಟ್‌ಗೆ ಅನೇಕ ಮಂದಿ ಹಲವು ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

- Advertisement -

Latest News

error: Content is protected !!