Monday, June 8, 2026
Homeಕರಾವಳಿಬೆಳ್ತಂಗಡಿ :  ಉಜಿರೆಗೆ ಆಗಮಿಸಿದ ಸಾಲುಮರದ ತಿಮ್ಮಕ್ಕ: ಗಿಡ ನೀಡಿ ಸ್ವಾಗತ ಕೋರಿದ ತಹಶೀಲ್ದಾರ್ ಪೃಥ್ವಿ...

ಬೆಳ್ತಂಗಡಿ :  ಉಜಿರೆಗೆ ಆಗಮಿಸಿದ ಸಾಲುಮರದ ತಿಮ್ಮಕ್ಕ: ಗಿಡ ನೀಡಿ ಸ್ವಾಗತ ಕೋರಿದ ತಹಶೀಲ್ದಾರ್ ಪೃಥ್ವಿ ಸಾನಿಕಾಂ

- Advertisement -
- Advertisement -

ಬೆಳ್ತಂಗಡಿ : ಪರಿಸರವಾದಿ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ  ಸಾಲುಮರದ ತಿಮ್ಮಕ್ಕ ಉಜಿರೆಗೆ ಅಗಮಿಸಿದ್ದು ಅವರನ್ನು ಅಧಿಕಾರಿಗಳು ಸ್ವಾಗತಿಸಿದ್ರು.

ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾರ್ಯಕ್ರಮ ಮುಗಿಸಿ ಮಂಗಳೂರು ಕಾರ್ಯಕ್ರಮಕ್ಕೆ ಇಂದು ಹೋಗುವಾಗ ಉಜಿರೆಯ ಓಷನ್ ಪರ್ಲ್ ಗೆ  ಭೇಟಿ ನೀಡಿದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ  ಸಾಲುಮರದ ತಿಮ್ಮಕ್ಕಅವರನ್ನು ಬೆಳ್ತಂಗಡಿ ತಹಶೀಲ್ದಾರ್ ಪೃಥ್ವಿ ಸಾನಿಕಾಂ , ಕಂದಾಯ ನಿರೀಕ್ಷಕ ಪ್ರತೀಷ್, ಗ್ರಾಮಲೆಕ್ಕಿಗ ಪ್ರದೀಪ್ ಮತ್ತಿತರ ಅಧಿಕಾರಿಗಳು ರಾಮಫಲ ಗಿಡ ನೀಡುವ ಮೂಲಕ ಸ್ವಾಗತಿಸಿದರು. ಬಳಿಕ ಬೆಳಗ್ಗಿನ ಉಪಹಾರವನ್ನು ಸೇವಿಸಿ ಮಂಗಳೂರಿಗೆ ಪ್ರಯಾಣ ಬೆಳೆಸಿದ್ದಾರೆ.

ಇಂದು ಸಂಜೆ ಮಂಗಳೂರು ಕಾರ್ಯಕ್ರಮ ಮುಗಿಸಿದ ಬಳಿಕ ಧರ್ಮಸ್ಥಳಕ್ಕೆ ಆಗಮಿಸಲಿದ್ದು ದೇವರ ದರ್ಶನ ಪಡೆದು ಡಾ.ಡಿ.ವೀರೇಂದ್ರ ಹೆಗ್ಡೆಯವರನ್ನು ಭೇಟಿ ಮಾಡಲಿದ್ದಾರೆ.

- Advertisement -

Latest News

error: Content is protected !!