Saturday, June 6, 2026
Homeತಾಜಾ ಸುದ್ದಿಆಸ್ಪತ್ರೆಯಲ್ಲಿ ಬೆಡ್ ಸಿಗದೇ ಪರದಾಡಿದ ಸಾಲುಮರದ ತಿಮ್ಮಕ್ಕ

ಆಸ್ಪತ್ರೆಯಲ್ಲಿ ಬೆಡ್ ಸಿಗದೇ ಪರದಾಡಿದ ಸಾಲುಮರದ ತಿಮ್ಮಕ್ಕ

- Advertisement -
- Advertisement -

ಬೆಂಗಳೂರು : ಬೆನ್ನು ನೋವಿನ ಹಿನ್ನೆಲೆ ಚಿಕಿತ್ಸೆಗೆಂದು ಅಪೋಲೋ ಆಸ್ಪತ್ರೆಗೆ ದಾಖಲಾಗಿರುವ ಸಾಲುಮರದ ತಿಮ್ಮಕ್ಕನವರಿಗೆ ಬೆಡ್ ಸಮಸ್ಯೆ ಎದುರಾಗಿದ್ದು ಪರದಾಟ ನಡೆಸಿರುವ ಘಟನೆ ನಡೆದಿದೆ.

ಬಚ್ಚಲುಮನೆಯಲ್ಲಿ ಬಿದ್ದು ಬೆನ್ನುಮೂಳೆ ಮುರಿತವಾಗಿದ್ದ ಸಾಲು ಮರದ ತಿಮ್ಮಕ್ಕನವರಿಗೆ ಇತ್ತಿಚೆಗೆ ಶಸ್ತ್ರಚಿಕಿತ್ಸೆಯಾಗಿತ್ತು. ಇದೇ ಹಿನ್ನೆಲೆಯಲ್ಲಿ ಸದ್ಯ ಬೆನ್ನು ನೋವು ಕಾಣಿಸಿಕೊಂಡಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಆದ್ರೆ ಆಸ್ಪತ್ರೆಯಲ್ಲಿ ನಾನ್ ಕೋವಿಡ್ ರೋಗಿಗಳಿಗೆ ಬೆಡ್ ಸಮಸ್ಯೆ ಎದುರಾಗಿದ್ದು, ಸಾಲುಮರದ ತಿಮ್ಮಕ್ಕ ಕೂಡ ಹಾಸಿಗೆಗಾಗಿ ಪರದಾಡುವಂತಾಗಿದೆ.

ತಿಮ್ಮಕ್ಕನವರು ಎರಡು ಗಂಟೆಗಳ ಕಾಲ ಆಸ್ಪತ್ರೆಯಲ್ಲಿ ಹಾಸಿಗಾಗಿ ಪರದಾಟ ನಡೆಸಿದ್ದಾರೆ. ನಾನ್ ಕೋವಿಡ್ ಬೆಡ್ ಹೊಂದಿಸಲು ವೈದ್ಯರು ಕೂಡ ಪ್ರಯತ್ನ ನಡೆದಿದ್ದಾರೆ. ಆದ್ರೆ ಕೋವಿಡ್ ರೋಗಿಗಳು ತುಂಬಿರೋದ್ರಿಂದ ವೈದ್ಯರಿಂದಲೂ ಹರಸಾಹಸ ಪಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಬಳಿಕ ಬೆಡ್ ವ್ಯವಸ್ಥೆ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

- Advertisement -

Latest News

error: Content is protected !!