- Advertisement -
![]()
- Advertisement -
ಚಿತ್ರದುರ್ಗದ ಹೊಳಲ್ಕೆರೆ ತಾಲ್ಲೂಕಿನ ಮಲ್ಲಾಡಿಹಳ್ಳಿ ಆಯುರ್ವೇದ ಕಾಲೇಜಿನಲ್ಲಿ ಓದುತ್ತಿದ್ದ ವಿದ್ಯಾರ್ಥಿನಿಯೋರ್ವಳಿಗೆ ಉಪನ್ಯಾಸಕನ ಜೊತೆ ಅನೈತಿಕ ಸಂಬಂಧವಿದೆ ಎಂಬ ಆರೋಪ ಕಟ್ಟಿ ಸಹಪಾಟಿಗಳಿಂದ ಅವಮಾನ ಮಾಡಿದ ಹಿನ್ನಲೆ ಆಕೆ ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ.
BMS ಮುಗಿಸಿ ಇಂಟರ್ನ್ ಶಿಫ್ ಮಾಡುತ್ತಿದ್ದ ನಿಖಿತ ಎನ್ನುವ ವಿದ್ಯಾರ್ಥಿನಿ ಡೆತ್ ನೋಟ್ ಬರೆದಿಟ್ಟು ಅವಮಾನದಿಂದ ನೇಣಿಗೆ ಶರಣಾಗಿದ್ದಾರೆ.
ಕಾಲೇಜಿನ ಉಪನ್ಯಾಸಕ ಡಾ.ರಾಜು ಜೊತೆ ಸಂಬಂಧ ಕಲ್ಪಿಸಿ ಸಹಪಾಟಿಗಳು ಅಪಪ್ರಚಾರ ಮಾಡಿದ್ದಾರೆ. ಅದರಿಂದ ಡಾ.ರಾಜು ಪತ್ನಿ ನಿಶಾ ನಿಖಿತಾ ಜತೆ ಜಗಳ ಮಾಡಿದ್ದರಂತೆ. ಅದರಿಂದ ಅವಮಾನಕ್ಕೊಳಗಾದ ನಿಖಿತಾ ಮನೆಯಲ್ಲಿ ಸಹಪಾಟಿಗಳ ಹೆಸರು ಬರೆದಿಟ್ಟು ನೇಣಿಗೆ ಶರಣಾಗಿದ್ದಾರೆ.
ಈ ಸಂಬಂಧ ಸ್ಥಳಕ್ಕೆ ಹೊಳಲ್ಕೆರೆ ಪೊಲೀಸರು ಬೇಟಿ ನೀಡಿ, ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ.
- Advertisement -


