ವಾಷಿಂಗ್ಟನ್: ಇರಾನ್ ವಿರುದ್ಧದ ಯುದ್ಧದ ನಡುವೆಯೇ ಹಾರ್ಮುಜ್ ಜಲಸಂಧಿಯ ಮೂಲಕ ಅಮೆರಿಕಾ ತೈಲ ಆಮದು ಮಾಡಿಕೊಳ್ಳುವುದಿಲ್ಲ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆ ನೀಡಿದ್ದಾರೆ.
ನಮಗೆ ಹಾರ್ಮುಜ್ ಜಲಸಂಧಿಯ ಮೂಲಕ ತೈಲ ಪಡೆಯುವ ಅಗತ್ಯವಿಲ್ಲ ಎಂದಿರುವ ಟ್ರಂಪ್, ಹಾರ್ಮುಜ್ ಮೂಲಕ ತೈಲ ಪಡೆಯುವ ರಾಷ್ಟ್ರಗಳೇ ಆ ಮಾರ್ಗವನ್ನು ರಕ್ಷಣೆ ಮಾಡಲಿ ಎಂದು ಹೇಳಿದ್ದಾರೆ.
ತೈಲ ಮಾರಾಟದಿಂದ ಮಾತ್ರ ಇರಾನ್ ಜೀವನ ನಡೆಸಲು ಸಾಧ್ಯವಿರುವ ಹಿನ್ನೆಲೆಯಲ್ಲಿ ಇರಾನ್ ಗೆ ತೈಲ ಮಾರಾಟ ಅನಿವಾರ್ಯವಾಗಿದೆ ಎಂದೂ ಡೊನಾಲ್ಡ್ ಟ್ರಂಪ್ ಹೇಳಿದ್ದು, ಎರಡು – ಮೂರು ವಾರಗಳಲ್ಲಿ ಇರಾನ್ ಮೇಲೆ ಅತ್ಯಂತ ಭೀಕರ ದಾಳಿಯನ್ನು ಅಮೆರಿಕಾ ನಡೆಸಲಿದ್ದು, ಅತಿ ಶೀಘ್ರವಾಗಿ ಇರಾನ್ ದೇಶವನ್ನು ಶಿಲಾಯುಕ್ಕೆ ನೂಕಲಿದ್ದೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಇರಾನ್‌ನಲ್ಲಿ ಆಡಳಿತ ಬದಲಾವಣೆ ನಮ್ಮ ಗುರಿಯಲ್ಲ ಎಂದೂ ಸ್ಪಷ್ಟಪಡಿಸಿರುವ ಡೊನಾಲ್ಡ್ ಟ್ರಂಪ್, ಒಪ್ಪಂದಕ್ಕೆ ಬರದೇ ಇದ್ದರೆ ಇರಾನ್‌ನ ವಿದ್ಯುತ್ ಉತ್ಪಾದನಾ ಕೇಂದ್ರಗಳ ಮೇಲೆ ಏಕಕಾಲಕ್ಕೆ ದಾಳಿ ಮಾಡುವುದಾಗಿಯೂ ಹೇಳಿದ್ದು, ಮನಸ್ಸು ಮಾಡಿದರೆ ತೈಲ ಕೇಂದ್ರಗಳನ್ನು ಕ್ಷಣಾರ್ಧದಲ್ಲಿ ಧ್ವಂಸ ಮಾಡುತ್ತೇವೆ ಎಂದು ಎಚ್ಚರಿಸಿದ್ದಾರೆ.


