ಕಾಸರಗೋಡು: ಇಲ್ಲಿನ ಶಿಕ್ಷಕನೋರ್ವ ಸುಮಾರು 2 ವರ್ಷಗಳಿಂದ ರಕ್ತದ ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ಸಮಾಜ ಸೇವಕ ಫಯಾಜ್ ಮಾಡೂರು ಅವರು ಸುಮಾರು 50 ಲಕ್ಷ ರೂ. ಗಳನ್ನು ದಾನಿಗಳಿಂದ ಸಂಗ್ರಹಿಸಿ ಅವರ ಚಿಕಿತ್ಸೆಗೆ ನೆರವಾಗಿದ್ದಾರೆ.
ಕ್ಯಾನ್ಸರ್ ನಿಂದ ಬಳಲುತ್ತಿರುವ ಶಿಕ್ಷಕ ಮುಂಡಿತ್ತಡ್ಕ ಶಾಲೆಯ ಹಿಂದಿ ಶಿಕ್ಷಕ ಪ್ರಶಾಂತ್ ರೈ (41). ಶಿಕ್ಷಕನಿಗೆ ಇಬ್ಬರು ಪುಟ್ಟ ಮಕ್ಕಳಿದ್ದಾರೆ.
ಶಿಕ್ಷಕ 2 ವರ್ಷಗಳಿಂದ ಕ್ಯಾನ್ಸರ್‌ನಿಂದ ಬಳಲುತ್ತಿದ್ದು ಈಗಾಗಲೇ ಇವರ ಚಿಕಿತ್ಸೆಗೆ 50 ಲಕ್ಷ ರೂಗಳನ್ನು ಒಟ್ಟುಗೂಡಿಸಿದ್ದು, ಒಟ್ಟಾರೆಯಾಗಿ 75 ಲಕ್ಷ ರೂ. ಸಂಗ್ರಹಿಸುವ ಗುರಿಯನ್ನು ಇರಿಸಿಕೊಂಡಿದ್ದಾರೆ.
ಇನ್ನು ಇವರ ಕುಟುಂಬ ಈಗಾಗಲೇ 40 ಲಕ್ಷ ರೂ. ಖರ್ಚು ಮಾಡಿದೆ ಚಿಕಿತ್ಸೆಗೆ ಸುಮಾರು 74 ಲಕ್ಷ ರೂ. ಬೇಕಾಗಿದೆ ಎಂದು ಬೆಂಗಳೂರಿನ ನಾರಾಯಣ ಹೆಲ್ತ್ ಸೆಂಟರ್‌ನ ಡಾ| ಶರತ್ ದಾಮೋದರ್ ತಿಳಿಸಿದ್ದಾರೆ.
ಈ ನಿಟ್ಟಿನಲ್ಲಿ ಸಮಾಜ ಸೇವಕರಾಗಿರುವ ಪ್ರಶಾಂತ್ ರೈ ಅವರು ಮೊತ್ತ ಸಂಗ್ರಹದ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಹಣವನ್ನು ದಾನಿಗಳು ಫಲಾನುಭವಿಗೆ ನೇರವಾಗಿ ಕರ್ನಾಟಕ ಬ್ಯಾಂಕ್‌ನ ಖಾತೆ ಸಂಖ್ಯೆ 5322500100961501 (IFSC-KARB0000532) ಫಯಾಜ್ ಮಾಡೂರು ತಿಳಿಸಿದ್ದಾರೆ.