Sunday, June 7, 2026
Homeಕರಾವಳಿಕೆಲಸದ ನಿಮಿತ್ತ ಹಾಸನಕ್ಕೆ ತೆರಳಿದ್ದ ಸುಳ್ಯದ ಯುವಕನನ್ನು ಬೆದರಿಸಿ ದರೋಡೆ 

ಕೆಲಸದ ನಿಮಿತ್ತ ಹಾಸನಕ್ಕೆ ತೆರಳಿದ್ದ ಸುಳ್ಯದ ಯುವಕನನ್ನು ಬೆದರಿಸಿ ದರೋಡೆ 

- Advertisement -
- Advertisement -

ಹಾಸನ; ತನ್ನ ಕೆಲಸದ ನಿಮಿತ್ತ  ಹಾಸನಕ್ಕೆ ತೆರಳಿದ್ದ  ಸುಳ್ಯ ಮೂಲದ ಯುವಕನನ್ನು ಬೆದರಿಸಿ ದರೋಡೆ ಮಾಡಿ ಆತನ ಮೊಬೈಲ್, ಹಣ ಕಸಿದು ಪರಾರಿಯಾಗಿರುವ ಘಟನೆ ಹಾಸನದಲ್ಲಿ ನಡೆದಿದೆ.

ಸುಳ್ಯ ಜಯನಗರ ಮೂಲದ ಯುವಕ ಪ್ರದೀಪ್ ಎಂಬವರು ಮಸಾಲೆ ಪದಾರ್ಥಗಳ ಲೈನ್ ಸೇಲ್ ಗೆಂದು ಹಾಸನಕ್ಕೆ ತೆರಳಿದ್ದರು. ಸೋಮವಾರ ರಾತ್ರಿ ಒಂದು ಗಂಟೆಯ ವೇಳೆಗೆ ಬಸ್ಸಿನಿಂದ ಇಳಿದು ಅವರು ರೂಮಿಗೆ ಹೋಗುತ್ತಿದ್ದ ಸಂದರ್ಭ ಚೂರಿ ತೋರಿಸಿ ಅವರ ಬಳಿಯಿದ್ದ ಸುಮಾರು 20 ಸಾವಿರ ರೂಪಾಯಿ, ಮೊಬೈಲ್ ಫೋನ್ ನನ್ನು ಕದ್ದು ಕಳ್ಳರು ಪರಾರಿಯಾಗಿದ್ದಾರೆ ಎನ್ನಲಾಗಿದೆ.

- Advertisement -

Latest News

error: Content is protected !!