Thursday, June 4, 2026
Homeಅಪರಾಧಪುತ್ತೂರು: ಚರ್ಚ್‌ ಹಾಗೂ ಶಾಲೆಯ ಒಳನುಗ್ಗಿದ ಕಳ್ಳರು - ಕಾಣಿಕೆ ಡಬ್ಬಿ ಹಣ ಕಳವು

ಪುತ್ತೂರು: ಚರ್ಚ್‌ ಹಾಗೂ ಶಾಲೆಯ ಒಳನುಗ್ಗಿದ ಕಳ್ಳರು – ಕಾಣಿಕೆ ಡಬ್ಬಿ ಹಣ ಕಳವು

- Advertisement -
- Advertisement -

ಪುತ್ತೂರು: ಚರ್ಚ್‌ ಹಾಗೂ ಶಾಲೆಯ ಬೀಗಮುರಿದು ಒಳನುಗ್ಗಿದ ಕಳ್ಳರು ಶಾಲಾ ಕೊಠಡಿಯೊಳಗಿನ ಕಪಾಟುಗಳನ್ನು ಒಡೆದು ಹುಡುಕಾಡಿ ಎಲ್ಲಾ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿದ ಘಟನೆ ಕೊಕ್ಕಡ ಸಮೀಪದ ಕೌಕ್ರಾಡಿ ಎಂಬಲ್ಲಿ ನಡೆದಿದೆ.


ಕೌಕ್ರಾಡಿ ಪ್ರಾಥಮಿಕ ಶಾಲೆ ಹಾಗೂ ಪ್ರೌಢ ಶಾಲೆಯ 5 ಕೊಠಡಿಗಳ ಬೀಗ ಮುರಿದು ಒಳನುಗ್ಗಿರುವ ಕಳ್ಳರು ಕೊಠಡಿಯೊಳಗಿದ್ದ ಕಪಾಟುಗಳನ್ನು ಹುಡುಕಾಡಿ ಎಲ್ಲಾ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿದ್ದು, ಆದರೆ ಯಾವುದೇ ವಸ್ತು ಕಳ್ಳತನ ವಾಗಿಲ್ಲ ಎಂದೆನ್ನಲಾಗಿದೆ.ಚರ್ಚ್ ನ ಮುಂಭಾಗ ದಲ್ಲಿದ್ದ ಮೇರಿಮಾತೆಯ ಗ್ರೆಟ್ಟೋ ದ ಗೇಟಿನ ಬೀಗ ಮುರಿದ ಅಲ್ಲಿದ್ದ ಕಾಣಿಕೆ ಡಬ್ಬಿಯನ್ನು ಮುರಿದು ಅದರಲ್ಲಿದ್ದ ಹಣವನ್ನು ದೋಚಿದ್ದಾರೆ ಎಂದು ತಿಳಿದುಬಂದಿದೆ.


ಸ್ಥಳಕ್ಕೆ ನೆಲ್ಯಾಡಿ ಹೊರಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ

- Advertisement -

Latest News

error: Content is protected !!