Thursday, June 4, 2026
HomeUncategorizedಕುಂದಾಪುರ: ಪಡುಕೋಣೆ ಶ್ರೀರಾಮ ದೇವಸ್ಥಾನದಲ್ಲಿ ಕಳ್ಳತನ, ಲಕ್ಷಾಂತರ ಮೌಲ್ಯದ ಬೆಳ್ಳಿ ಆಭರಣ ಕಳವು

ಕುಂದಾಪುರ: ಪಡುಕೋಣೆ ಶ್ರೀರಾಮ ದೇವಸ್ಥಾನದಲ್ಲಿ ಕಳ್ಳತನ, ಲಕ್ಷಾಂತರ ಮೌಲ್ಯದ ಬೆಳ್ಳಿ ಆಭರಣ ಕಳವು

- Advertisement -
- Advertisement -

ಕುಂದಾಪುರ: ನಿನ್ನೆ ತಡರಾತ್ರಿ ನಾಡ ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿನ ಪಡುಕೋಣೆಯಲ್ಲಿರುವ ಶ್ರೀರಾಮ ದೇವಸ್ಥಾನದ ಮುಖ್ಯದ್ವಾರದ ಚಿಲಕ ಮುರಿದು ಒಳ ನುಗ್ಗಿರುವ ಕಳ್ಳರು ಅಂದಾಜು 1.5 ಲಕ್ಷ ರೂ ಮೌಲ್ಯದ ಬೆಳ್ಳಿಯ ಪ್ರಭಾವಳಿಯನ್ನು ಕಳವು ಗೈದಿದ್ದಾರೆ.

ದೇಗುಲದ ಅರ್ಚಕರು ಇಂದು ಬೆಳಿಗ್ಗೆ ಪೂಜೆಗೆಂದು ದೇವಾಲಯಕ್ಕೆ ಆಗಮಿಸಿದ ವೇಳೆ ಈ ಕೃತ್ಯ ಎಸಗಿರುವುದು ಬೆಳಕಿಗೆ ಬಂದಿದೆ.

ಕೂಡಲೇ ಗಂಗೊಳ್ಳಿ ಪೋಲೀಸ್ ಠಾಣೆಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬೈಂದೂರು ಪೊಲೀಸ್ ಸರ್ಕಲ್ ಇನ್ಸ್‌ಪೆಕ್ಟರ್ ಸುರೇಶ್, ಮತ್ತು ಗಂಗೊಳ್ಳಿ ಸ್ಟೇಷನ್ ಹೌಸ್ ಆಫೀಸರ್ ಭೀಮಾಶಂಕರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ಕುರಿತು ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!