Friday, June 5, 2026
Homeಕರಾವಳಿಭಾರಿ ಮಳೆ: ಶಿರಾಡಿಯಲ್ಲಿ ಟ್ಯಾಂಕರ್ -ಕಂಟೈನರ್ ನಡುವೆ ಅಪಘಾತ

ಭಾರಿ ಮಳೆ: ಶಿರಾಡಿಯಲ್ಲಿ ಟ್ಯಾಂಕರ್ -ಕಂಟೈನರ್ ನಡುವೆ ಅಪಘಾತ

- Advertisement -
- Advertisement -

ನೆಲ್ಯಾಡಿ: ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಎಂಬಲ್ಲಿ ಟ್ಯಾಂಕರ್ -ಕಂಟೈನರ್ ನಡುವೆ ನಡೆದ ಅಪಘಾತದಲ್ಲಿ ಕಂಟೈನರ್ ಚಾಲಕನ ಕಾಲಿಗೆ ಗಾಯವಾಗಿದೆ.

ಇಂದು ಸಂಜೆ ಸುರಿದ ಭಾರಿ ಮಳೆಗೆ ರಸ್ತೆ ಸರಿಯಾಗಿ ಗೋಚರಿಸದೆ ಈ ಅಪಘಾತ ನಡೆದಿದೆ ಎಂದು ಅಂದಾಜಿಸಲಾಗಿದೆ. ಮಂಗಳೂರಿಗೆ ಬರುತ್ತಿರುವ ಕಂಟೈನರ್ ಮತ್ತು ಮಂಗಳೂರಿನಿಂದ ಬೆಂಗಳೂರು ಕಡೆಗೆ ತೈಲ ಸಾಗಾಟದ ಟ್ಯಾಂಕರ್ ನಡುವೆ ಅಪಘಾತ ಸಂಭವಿಸಿದೆ.

ಘಟನಾ ಸ್ಥಳಕ್ಕೆ ಉಪ್ಪಿನಂಗಡಿ ಠಾಣಾ ಪೊಲೀಸರು ಆಗಮಿಸಿ, ಸುಗಮ ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.
ಹೆಚ್ಚಿನ ಮಾಹಿತಿಯನ್ನು ನೀರಿಕ್ಷಿಸಲಾಗಿದೆ.

- Advertisement -

Latest News

error: Content is protected !!