Friday, June 5, 2026
Homeತಾಜಾ ಸುದ್ದಿಕೊರೊನಾ ಸೋಂಕಿಗೆ ಒಳಗಾದ ಮಜಾ ಟಾಕೀಸ್ ರೆಮೋಗೆ ಏನಾಯ್ತು ಗೊತ್ತಾ?

ಕೊರೊನಾ ಸೋಂಕಿಗೆ ಒಳಗಾದ ಮಜಾ ಟಾಕೀಸ್ ರೆಮೋಗೆ ಏನಾಯ್ತು ಗೊತ್ತಾ?

- Advertisement -
- Advertisement -

ಬೆಂಗಳೂರು: ಕೊರೊನಾ ಅನ್ನೋ ಮಹಾಮಾರಿ ಏನೆಲ್ಲಾ ಮಾಡುತ್ತಿದೆ ಅನ್ನೋದು ನಾವೆಲ್ಲಾ ನೋಡುತ್ತಲೇ ಇದ್ದೇವೆ. ಪ್ರತಿದಿನ ರಾಜ್ಯದಲ್ಲಿ 25 ಸಾವಿರಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗುತ್ತಿವೆ. ನೂರಾರು ಸಂಖ್ಯೆಯಲ್ಲಿ ಜನ ಮಹಾಮಾರಿಗೆ ಬಲಿಯಾಗುತ್ತಿದ್ದಾರೆ. ಸ್ಯಾಂಡಲ್ ವುಡ್ ತಾರೆಯರು, ಕಿರುತೆರೆ ತಾರೆಯರು, ರಾಜಕಾರಣಿಗಳು ಹೀಗೆ ಎಲ್ಲರನ್ನೂ ಕಾಡುತ್ತಿದೆ ಕೊರೊನಾ.

ಇನ್ನು ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಮಜಾ ಟಾಕೀಸ್ ಕಾರ್ಯಕ್ರಮ ಖ್ಯಾತಿಯ ರೆಮೋ ಅಲಿಯಾಸ್ ರೇಖಾ ಮೋಹನ್ ಅವರು ಕೂಡ ಕೊರೊನಾಗೆ ತುತ್ತಾಗಿದ್ದರು. ಇದೀಗ ಅವರು ಗುಣಮುಖರಾಗಿದ್ದು ತಮ್ಮ ಕೊರೊನಾದ ಭಯಾನಕ ಅನುಭವವನ್ನು ಹಂಚಿಕೊಂಡಿದ್ದಾರೆ. ಆಕ್ಸಿಜನ್ ಸಮಸ್ಯೆಯಾಗಿ ನಾನು 5 ದಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕಾಯಿತು.ಆದ್ರೆ ಆ ದಿನಗಳನ್ನು ನಾನು ಪಾಸಿಟಿವ್ ತೆಗೆದುಕೊಂಡು ಧೈರ್ಯದಿಂದ ಎದುರಿಸಿದೆ ಎಂದಿದ್ದಾರೆ. ಅಲ್ಲದೇ ಇಂತಹ ಕ್ಷಣಗಳು ಬಂದ್ರೆ ಎಲ್ಲರೂ ಧೈರ್ಯದಿಂದ ಇರಬೇಕು ಎಂದಿದ್ದಾರೆ.

- Advertisement -

Latest News

error: Content is protected !!