Tuesday, May 14, 2024
Homeತಾಜಾ ಸುದ್ದಿಮಳೆಯಿಂದಾಗಿರುವ ಬೆಳೆ ಹಾನಿಗೆ ಎನ್ ಡಿಆರ್ ಎಫ್ ಮಾರ್ಗಸೂಚಿಗಿಂತ ಹೆಚ್ಚುವರಿ ದರದಲ್ಲಿ ಪರಿಹಾರ ನೀಡಲು ರಾಜ್ಯ...

ಮಳೆಯಿಂದಾಗಿರುವ ಬೆಳೆ ಹಾನಿಗೆ ಎನ್ ಡಿಆರ್ ಎಫ್ ಮಾರ್ಗಸೂಚಿಗಿಂತ ಹೆಚ್ಚುವರಿ ದರದಲ್ಲಿ ಪರಿಹಾರ ನೀಡಲು ರಾಜ್ಯ ಸರ್ಕಾರ ಆದೇಶ

spot_img
- Advertisement -
- Advertisement -

ಬೆಂಗಳೂರು: 2022-23ನೇ ಸಾಲಿನಲ್ಲಿ ರಾಜ್ಯದಲ್ಲಿ ಅತಿವೃಷ್ಟಿ ಮತ್ತು ಪ್ರವಾಹದಿಂದಾಗಿ ಬೆಳೆ ಹಾನಿಯಾಗಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಇನ್ ಪುಟ್ ಸಬ್ಸಿಡಿಯನ್ನು ಹೆಚ್ಚುವರಿ ಪರಿಹಾರ ನೀಡಲು ತೀರ್ಮಾನಿಸಿದೆ‌.

ಎನ್ ಡಿಆರ್ ಎಫ್ ಮತ್ತು ಎಸ್ ಡಿಆರ್ ಎಫ್ ಮಾರ್ಗಸೂಚಿಗಿಂತ ಹೆಚ್ಚುವರಿ ದರದಲ್ಲಿ ಪರಿಹಾರ ‌ನೀಡಲು ರಾಜ್ಯ ಸರ್ಕಾರ ನಿರ್ಧಾರ ಮಾಡಿ ಮಂಜೂರಾತಿ ಆದೇಶ ಹೊರಡಿಸಿದೆ.

ಮಳೆಯಾಶ್ರಿತ ಬೆಳೆಗೆ ಪ್ರತಿ ಹೆಕ್ಟೇರ್ ಮಾರ್ಗಸೂಚಿ ದರ 6,800 ರೂಪಾಯಿಯೊಂದಿಗೆ ಹೆಚ್ಚುವರಿ ದರ 6,800 ರೂಪಾಯಿ ಸೇರಿ ಪರಿಷ್ಕೃತ ದರ 13,600 ರೂಪಾಯಿ ದೊರೆಯಲಿದೆ.

ನೀರಾವರಿ ಬೆಳೆ ಪ್ರತಿ ಹೆಕ್ಟೇರ್ ಮಾರ್ಗಸೂಚಿ ದರ 13,500 ರೂಪಾಯಿಯೊಂದಿಗೆ ಹೆಚ್ಚುವರಿ ದರ 11,500 ರೂಪಾಯಿ ಸೇರಿ ಪರಿಷ್ಕೃತ ದರ 25,000 ರೂಪಾಯಿ ದೊರೆಯಲಿದೆ.

ಬಹುವಾರ್ಷಿಕ ಬೆಳೆ ಪ್ರತಿ ಹೆಕ್ಟೇರ್ ಗೆ ಮಾರ್ಗಸೂಚಿ ದರ 18,000 ರೂಪಾಯಿಯೊಂದಿಗೆ ಹೆಚ್ಚುವರಿ ದರ 10,000 ರೂಪಾಯಿ ಸೇರಿ ಪರಿಷ್ಕೃತ ದರ 28,000 ರೂಪಾಯಿ ದೊರೆಯಲಿದೆ.

ಪ್ರತಿ 2 ಹೆಕ್ಟೇರ್ ಗೆ ಸೀಮಿತಗೊಳಿಸಿ ಇನ್ ಪುಟ್ ಸಬ್ಸಿಡಿ ಪಾವತಿಗೆ ರಾಜ್ಯ ಸರ್ಕಾರದಿಂದ ಮಂಜೂರಾತಿ ಆದೇಶ ಹೊರಡಿಸಲ್ಪಟ್ಟಿದೆ.

- Advertisement -
spot_img

Latest News

error: Content is protected !!