Saturday, June 6, 2026
Homeತಾಜಾ ಸುದ್ದಿಮೂಲ್ಕಿ: ನಾಳೆ ಪಂಜ ಗ್ರಾಮದಲ್ಲಿ ಡಿಸಿ ಗ್ರಾಮ ವಾಸ್ತವ್ಯ

ಮೂಲ್ಕಿ: ನಾಳೆ ಪಂಜ ಗ್ರಾಮದಲ್ಲಿ ಡಿಸಿ ಗ್ರಾಮ ವಾಸ್ತವ್ಯ

- Advertisement -
- Advertisement -

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ಜು. 16ರಂದು ಮೂಲ್ಕಿ ತಾಲೂಕಿನ ಪಂಜ ಗ್ರಾಮದ ವಿಠೋಭ ಭಜನ ಮಂದಿರದಲ್ಲಿ ಗ್ರಾಮ ವಾಸ್ತವ್ಯ ಮಾಡಲಿದ್ದಾರೆ.

ಗ್ರಾಮ ಲೆಕ್ಕಾಧಿಕಾರಿಗಳು ಸಮಸ್ಯೆಗಳಿಗೆ ಸಂಬಂಧಿಸಿದಂತೆ ಅರ್ಜಿಗಳನ್ನು ಸ್ವೀಕರಿಸುವಂತೆ ಸೂಚಿಸಲಾಗಿದೆ. ಸಾರ್ವ ಜನಿಕರು ನೇರವಾಗಿ ಅಹವಾಲುಗಳನ್ನು ನೀಡಲು ಬಯಸಿದ್ದಲ್ಲಿ, ಪಂಜ ಗ್ರಾ.ಪಂ.ಗೆ ನೀಡಬಹುದಾಗಿದೆ.

ವಿವಿಧ ಇಲಾಖೆಗಳ ಅಧಿಕಾರಿಗಳು ಜಿಲ್ಲಾಧಿಕಾರಿಗಳ ಜತೆಯಲ್ಲಿದ್ದು ಸಮಸ್ಯೆಗಳನ್ನು ಆದಷ್ಟು ಸ್ಥಳದಲ್ಲಿ ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

Latest News

error: Content is protected !!