Saturday, June 6, 2026
Homeಕರಾವಳಿಕಾಸರಗೋಡು: ಕೆರೆಗೆ ಬಿದ್ದು ನಿವೃತ್ತ ಶಿಕ್ಷಕ ಸಾವು

ಕಾಸರಗೋಡು: ಕೆರೆಗೆ ಬಿದ್ದು ನಿವೃತ್ತ ಶಿಕ್ಷಕ ಸಾವು

- Advertisement -
- Advertisement -

ಕಾಸರಗೋಡು: ತೋಟದ ಕೆರೆಗೆ ಬಿದ್ದು ನಿವೃತ್ತ ಶಿಕ್ಷಕರೋರ್ವರು ಮೃತಪಟ್ಟ ಘಟನೆ ಪೆರ್ಲ ಬಳಿ ನಡೆದಿದೆ. ಪೆರ್ಲ ಪೆಲ್ತಾಜೆಯ ಕೃಷ್ಣ ನಾಯ್ಕ್ (74) ಮೃತಪಟ್ಟವರು.

ಬೆಳಿಗ್ಗೆ ಮನೆಯಿಂದ ತೋಟಕ್ಕೆ ತೆರಳಿದ್ದ ಕೃಷ್ಣ ನಾಯ್ಕ್ ಅವರು ನಾಪತ್ತೆಯಾಗಿದ್ದರು. ಮನೆಯವರು ಶೋಧ ನಡೆಸಿದಾಗ ತೋಟದ ಕರೆಯಲ್ಲಿ ಪತ್ತೆಯಾಗಿದ್ದು, ಮೇಲಕ್ಕೆತ್ತಿ ಕಾಸರಗೋಡು ಆಸ್ಪತ್ರೆಗೆ ತಲಪಿದರೂ ಆಗಲೇ ಮೃತಪಟ್ಟಿದ್ದರು.

ಏತಡ್ಕ, ಸೂರಂಬೈಲ್, ಕುಂಬಳೆ, ಪಿಲಾಂಕಟ್ಟೆ ಮೊದಲಾದ ಶಾಲೆಗಳಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದು, ಪಿಲಾಂ ಕಟ್ಟೆ ಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು.

- Advertisement -

Latest News

error: Content is protected !!