Thursday, June 4, 2026
Homeಇತರಹಾಸನದಲ್ಲಿ ನಾಳೆಯಿಂದ ರೆಸಾರ್ಟ್, ಹೋಂ ಸ್ಟೇಗಳು ಬಂದ್ ಜಿಲ್ಲಾಧಿಕಾರಿಯಿಂದ ಆದೇಶ

ಹಾಸನದಲ್ಲಿ ನಾಳೆಯಿಂದ ರೆಸಾರ್ಟ್, ಹೋಂ ಸ್ಟೇಗಳು ಬಂದ್ ಜಿಲ್ಲಾಧಿಕಾರಿಯಿಂದ ಆದೇಶ

- Advertisement -
- Advertisement -

ಹಾಸನ : ರಾಜ್ಯದಲ್ಲಿ ಎಷ್ಟೇ ಮುನ್ನೆಚರಿಕಾ ಕ್ರಮಗಳನ್ನು ಕೈಗೊಂಡರೂ ಕೂಡ ದಿನೇ ದಿನೇ ಕೊರೊನಾ ಕೇಸುಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಹಾಗಾಗಿ ಹಾಸನ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕೋವಿಡ್-19 ಪ್ರಕರಣಗಳಿಗೆ ಬ್ರೇಕ್ ಹಾಕೋದಕ್ಕೆ ತನ್ನದೇ ಆದ ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದೆ ಜಿಲ್ಲಾಡಳಿತ.

ಹೌದು.. ಹಾಸನದಲ್ಲಿ ಲಾಕ್ ಡೌನ್ ತೆರವಾಗುತ್ತಿದ್ದಂತೆ ಹೆಚ್ಚಿನ ಎಲ್ಲಾ ರೆಸಾರ್ಟ್ ಹಾಗೂ ಹೋಂ ಸ್ಟೇಗಳು ಎಂದಿನಂತೆ ಕಾರ್ಯನಿರ್ವಹಿಸೋದಕ್ಕೆ ಆರಂಭಿಸಿದ್ವು. ಬೇರೆ ಬೇರೆ ಭಾಗಗಳಿಂದ ಪ್ರವಾಸಿಗರು ಕೂಡ ಬರೋದಕ್ಕೆ ಆರಂಭಿಸಿದರು. ಜನರ ಓಡಾಟ, ಪ್ರವಾಸಿಗರ ಸಂಖ್ಯೆ ನಿಧಾನಕ್ಕೆ ಹೆಚ್ಚಾಗುತ್ತಿದ್ದಂತೆ ಹಾಸನದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಕೂಡ ಹೆಚ್ಚಾಗೋದಕ್ಕೆ ಶುರುವಾಯ್ತು. ಹೀಗಾಗಿ ರೆಸಾರ್ಟ್ ಹಾಗೂ ಹೋಂ ಸ್ಟೇಗಳನ್ನು ಬಂದ್ ಮಾಡ್ಬೇಕು ಅಂತಾ ಜಿಲ್ಲೆಯ ಜನರ ಒತ್ತಾಯ ಜಾಸ್ತಿಯಾಯಿತು. ಹಾಗಾಗಿ ಇದೀಗ ಜಿಲ್ಲಾಡಳಿತ ಈ ನಿಟ್ಟಿನಲ್ಲಿ ಕ್ರಮ ಕೈಗೊಂಡಿದೆ. ಹಾಗಾಗಿ ನಾಳಿನಿಂದ ಮುಂದಿನ ಆದೇಶದವರೆಗೂ ಜಿಲ್ಲೆಯ ರೆಸಾರ್ಟ್ ಹಾಗೂ ಹೋಂ ಸ್ಟೇಗಳನ್ನು ಬಂದ್ ಮಾಡ್ಬೇಕು ಅಂತಾ ಜಿಲ್ಲಾಧಿಕಾರಿ ಆರ್. ಗಿರೀಶ್ ಅವರು ಸೂಚನೆ ನೀಡಿದ್ದಾರೆ.

- Advertisement -

Latest News

error: Content is protected !!