Thursday, June 4, 2026
Homeಆರಾಧನಾದೇವಸ್ಥಾನಗಳಲ್ಲಿ ಪೂಜಾ ಸೇವೆ ಆರಂಭಕ್ಕೆ ಮುಜರಾಯಿ ಸಚಿವರಿಗೆ ಮನವಿ

ದೇವಸ್ಥಾನಗಳಲ್ಲಿ ಪೂಜಾ ಸೇವೆ ಆರಂಭಕ್ಕೆ ಮುಜರಾಯಿ ಸಚಿವರಿಗೆ ಮನವಿ

- Advertisement -
- Advertisement -

ಮಂಗಳೂರು: ದೇವಸ್ಥಾನಗಳಲ್ಲಿ ತೀರ್ಥ ಪ್ರಸಾದ ಮತ್ತು ಪೂಜಾ ಸೇವೆಗಳನ್ನು ಶೀಘ್ರ ಪ್ರಾರಂಭಿಸಲು ಕೋವಿಡ್‌ ತಡೆ ನಿರ್ಬಂಧ ಮಾರ್ಗಸೂಚಿ ಸಡಿಲಿಸಿ ಆದೇಶ ಹೊರಡಿಸಬೇಕು ಎಂದು ವಿಶ್ವ ಹಿಂದೂ ಪರಿಷತ್‌ ಸಂಘಟನೆ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರಲ್ಲಿ ಮನವಿ ಮಾಡಿದೆ. ಕಳೆದ ವರ್ಷದಂತೆ ನಾಗರ ಪಂಚಮಿ, ಶ್ರೀಕೃಷ್ಣ ಜನ್ಮಾಷ್ಟಮಿ, ಗಣೇಶ ಚತುರ್ಥಿ ಹಬ್ಬಗಳ ಆಚರಣೆ, ಧಾರ್ಮಿಕ ವಿಧಿಗಳಿಗೆ ಚ್ಯುತಿ ಬರದಂತೆ ಮಾರ್ಗದರ್ಶಿ ಸೂತ್ರಗಳನ್ನು ತಕ್ಷಣ ಬಿಡುಗಡೆಗೊಳಿಸಬೇಕು ಎಂದು ಮನವಿಯಲ್ಲಿ ಕೋರಲಾಗಿದೆ. ದೇವಸ್ಥಾನಗಳಲ್ಲಿ, ಸಾರ್ವಜನಿಕವಾಗಿ ನಡೆಸುವ ಆಚರಣೆಗಳನ್ನು ಕಳೆದ ವರ್ಷದಂತೆ ಧಾರ್ಮಿಕ ವಿಧಿಗಳಿಗೆ ಚ್ಯುತಿ ಇಲ್ಲದಂತೆ ಆಚರಿಸಲು ತಕ್ಷಣ ಮಾರ್ಗದರ್ಶಿ ಸೂತ್ರಗಳನ್ನು ಬಿಡುಗಡೆ ಮಾಡಬೇಕು ಎಂಬುದಾಗಿ ಸಚಿವರಿಗೆ ಮನವಿ ಸಲ್ಲಿಸಲಾಗಿದೆ.

- Advertisement -

Latest News

error: Content is protected !!