Thursday, June 4, 2026
Homeತಾಜಾ ಸುದ್ದಿನನ್ನ ಮಗ ಮೆಸೇಜ್ ಮಾಡ್ತಿದ್ದ ಅಂತಾ ಇಷ್ಟು ದಿನ ಸೆಲೆಬ್ರೆಟಿಗಳು ಯಾಕೆ ಹೇಳಿಲ್ಲ?; ಆರೋಪ ಮಾಡಿದವರ...

ನನ್ನ ಮಗ ಮೆಸೇಜ್ ಮಾಡ್ತಿದ್ದ ಅಂತಾ ಇಷ್ಟು ದಿನ ಸೆಲೆಬ್ರೆಟಿಗಳು ಯಾಕೆ ಹೇಳಿಲ್ಲ?; ಆರೋಪ ಮಾಡಿದವರ ವಿರುದ್ಧ ರೇಣುಕಾಸ್ವಾಮಿ ತಂದೆ ಗರಂ

- Advertisement -
- Advertisement -

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಟ್ಟಂತೆ ನಟ ದರ್ಶನ್ ಅವರು ಅರೆಸ್ಟ್ ಆದ ಬೆನ್ನಲ್ಲೇ ಕೆಲವು ಸೆಲೆಬ್ರೆಟಿಗಳು ರೇಣುಕಾಸ್ವಾಮಿ ನಮಗೂ ಮೆಸೇಜ್ ಮಾಡಿದ್ದ ಎಂದು ಆರೋಪಿಸುತ್ತಿದ್ದಾರೆ. ಈ ಬಗ್ಗೆ  ರೇಣುಕಾಸ್ವಾಮಿಯ ತಂದೆ ಕಾಶೀನಾಥಯ್ಯ ಶಿವನಗೌಡ್ರ ಅಸಮಾಧಾನ ಹೊರ ಹಾಕಿದ್ದಾರೆ.

ರೇಣುಕಾಸ್ವಾಮಿ ನಮಗೂ ಅಶ್ಲೀಲ‌ ಸಂದೇಶ ಕಳಿಸಿದ್ದ ಎಂದು ಅವರೆಲ್ಲಾ ಆರೋಪ ಮಾಡುತ್ತಿದ್ದರಲ್ಲಾ?ಇಷ್ಟು ದಿನಗಳ ಕಾಲ ಏಕೆ ಹೇಳಿರಲಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ.ಈ ಪ್ರಕರಣ ನಡೆದ ಬಳಿಕ ಏಕೆ ಹೇಳುತ್ತಿದ್ದಾರೆ? ಈ ಮೊದಲೇ ಪ್ರಕರಣ ದಾಖಲು ಮಾಡಬಹುದಾಗಿತ್ತಲ್ಲ? ಈಗಲೂ ಅವರು ಈ ಬಗ್ಗೆ ಪ್ರಕರಣ ದಾಖಲಿಸಬಹುದು. ಪೊಲೀಸರು ತನಿಖೆ ಮಾಡಿ ಸತ್ಯಾಸತ್ಯ ಪರಿಶೀಲಿಸುತ್ತಾರೆ.ಈ ಹಿಂದೆ ರೇಣುಕಾಸ್ವಾಮಿ ವಿರುದ್ಧ ಯಾವುದೇ ಆರೋಪ ಬಂದಿಲ್ಲ. ನಮ್ಮ ಬಳಿ ಕೇವಲ ರೇಣುಕಾಸ್ವಾಮಿ ಕೆಲಸದ ಬಗ್ಗೆ ಮಾತಾಡುತ್ತಿದ್ದನು.ರೇಣುಕಾಸ್ವಾಮಿ ವಿಚಾರದಲ್ಲಿ ಹಿಂದೆ ಯಾವುದೇ ಗಲಾಟೆ ಆಗಿಲ್ಲ ಎಂದಿದ್ದಾರೆ.

ಅಲ್ಲದೇ ರೇಣುಕಾಸ್ವಾಮಿ ಕೆಲಸ ಮಾಡುತ್ತಿದ್ದ ಅಪೊಲೋ ಫಾರ್ಮಸಿ ಹೆಚ್ ಆರ್ ಬಂದು ನಮಗೆ ಸಾಂತ್ವನ ಹೇಳಿದ್ದಾರೆ. ದಾಖಲೆ ಕೊಟ್ಟರೆ ಬಾಕಿ ಸ್ಯಾಲರಿ, ಪಿಎಫ್ ಕೊಡುವುದಾಗಿ ಹೇಳಿದ್ದಾರೆ ಎಂದು ಅವರು ತಿಳಿಸಿದ್ದಾರೆ.

- Advertisement -

Latest News

error: Content is protected !!