- Advertisement -
- Advertisement -
ಮುಂಬೈ :ದೇಶದ ಉದ್ಯಮ ಕ್ಷೇತ್ರದ ದಿಗ್ಗಜ ರಿಲಯನ್ಸ್ ಇಂಡಸ್ಟ್ರೀಸ್ 2020ರ ಜನವರಿ-ಮಾರ್ಚ್ ತ್ರೈಮಾಸಿಕದಲ್ಲಿ 6,348 ಕೋಟಿ ಆದಾಯ ಗಳಿಸಿದೆ ಎಂದು ಕಂಪನಿಯ ವರದಿ ತಿಳಿಸಿದೆ. ಹಿಂದಿನ ತ್ರೈಮಾಸಿಕದಲ್ಲಿ 11,640 ಕೋಟಿ ರೂ. ಲಾಭ ಮತ್ತು ಕಳೆದ ವರ್ಷ ಇದೇ ತ್ರೈಮಾಸಿಕದಲ್ಲಿ 10,362 ಕೋಟಿ ರೂ. ಇತ್ತು.
ರಿಲಯನ್ಸ್ ಜಿಯೋ ನಿವ್ವಳ ಲಾಭವು ನಾಲ್ಕನೇ ತ್ರೈಮಾಸಿಕದಲ್ಲಿ ಶೇ.177ರಷ್ಟು ಏರಿಕೆ ಕಂಡಿದ್ದು 2,331 ಕೋಟಿ ರೂ. ಗಳಿಸಿದೆ. ಉದ್ಯಮಿ ಮುಖೇಶ್ ಅಂಬಾನಿ ಒಡೆತನದ ಟೆಲಿಕಾಂ ಉದ್ಯಮವು ಕಳೆದ ವರ್ಷದ ಇದೇ ತ್ರೈಮಾಸಿಕದಲ್ಲಿ 840 ಕೋಟಿ ರೂ. ನಿವ್ವಳ ಲಾಭ ಗಳಿಸಿತ್ತು.
ಡಿಜಿಟಲ್ ವ್ಯವಹಾರವು ದಾಖಲೆಯ ತ್ರೈಮಾಸಿಕ ಇಬಿಐಟಿಡಿಎ 6,452 ಕೋಟಿ ರೂ.ಗಳೊಂದಿಗೆ ದೊಡ್ಡ ಬೆಳವಣಿಗೆ ಸಾಧಿಸಿದೆ. ಇದು ಕಳೆದ ವರ್ಷದಿಂದ ಈ ವರ್ಷಕ್ಕೆ 42.9 ರಷ್ಟು ಹೆಚ್ಚಾಗಿದೆ. ಡಿಜಿಟಲ್ ಸೇವೆಗೆ ವಾರ್ಷಿಕ ಆದಾಯ ಶೇ. 40.7 ಮತ್ತು ಚಿಲ್ಲರೆ ವ್ಯಾಪಾರ 24.8 ರಷ್ಟು ಆದಾಯವನ್ನು ದಾಖಲಿಸಿದೆ.
- Advertisement -