Wednesday, May 1, 2024
Homeತಾಜಾ ಸುದ್ದಿಲೋಕಸಭೆ ಚುನಾವಣೆಯ ಕಾಂಗ್ರೆಸ್‌ ಪ್ರಣಾಳಿಕೆ ಬಿಡುಗಡೆ; ಉದ್ಯೋಗ ಸೃಷ್ಟಿ, ಜಾತಿ ಗಣತಿಯ ಭರವಸೆ

ಲೋಕಸಭೆ ಚುನಾವಣೆಯ ಕಾಂಗ್ರೆಸ್‌ ಪ್ರಣಾಳಿಕೆ ಬಿಡುಗಡೆ; ಉದ್ಯೋಗ ಸೃಷ್ಟಿ, ಜಾತಿ ಗಣತಿಯ ಭರವಸೆ

spot_img
- Advertisement -
- Advertisement -

ಕಾಂಗ್ರೆಸ್ 2024ರ ಲೋಕಸಭೆ ಚುನಾವಣೆಗೆ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು, ಉದ್ಯೋಗ ಸೃಷ್ಟಿ, ಮೂಲಸೌಕರ್ಯಗಳ ಅಭಿವೃದ್ಧಿ ಮತ್ತು ರಾಷ್ಟ್ರೀಯ ಜಾತಿ ಗಣತಿ ಪ್ರಮುಖ ಮುಖ್ಯಾಂಶಗಳಾಗಿದ್ದು, ಪಕ್ಷದ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿಯವರು ದೆಹಲಿಯ ಪಕ್ಷದ ಕಚೇರಿಯಲ್ಲಿ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು.

ಮಾಜಿ ಕೇಂದ್ರ ಹಣಕಾಸು ಸಚಿವ ಪಿ ಚಿದಂಬರಂ ಅವರು ಪ್ರಣಾಳಿಕೆ ಸಿದ್ಧಪಡಿಸಿದ ಸಮಿತಿಯ ನೇತೃತ್ವ ವಹಿಸಿದ್ದರು.

ಖರ್ಗೆ ಪ್ರಣಾಳಿಕೆ ಕುರಿತು ಮಾತನಾಡಿ, “ಈ ಪ್ರಣಾಳಿಕೆಯು ದೇಶದ ರಾಜಕೀಯ ಇತಿಹಾಸದಲ್ಲಿ ‘ನ್ಯಾಯ ಕಾ ದಾಸ್ತಾವೆಜ್’ (ನ್ಯಾಯಕ್ಕಾಗಿ ದಾಖಲೆ) ಆಗಿರುತ್ತದೆ. ‘ಭಾರತ್ ಜೋಡೋ ನ್ಯಾಯ ಯಾತ್ರೆ’ಯ ಐದು ಸ್ತಂಭಗಳಾದ ಯುವ, ರೈತರು, ಮಹಿಳೆಯರು, ಕಾರ್ಮಿಕರು ಹಾಗೂ 25 ಗ್ಯಾರಂಟಿಗಳನ್ನು ಒಳಗೊಂಡಿದೆ” ಎಂದು ಹೇಳಿದರು.

ಪ್ರಣಾಳಿಕೆಯ ಒಟ್ಟಾರೆ ಆಶಯವು, ಉದ್ಯೋಗ, ಸಂಪತ್ತು ಕ್ರೋಢೀಕರಣ ಮತ್ತು ಕಲ್ಯಾಣವನ್ನು ಆಧರಿಸಿದೆ ಎಂದು ಪಕ್ಷ ಹೇಳಿದೆ.

“ಉದ್ಯೋಗ ಎಂದರೆ ನೀವು ಉದ್ಯೋಗಗಳನ್ನು ನೀಡಬೇಕು. ಅದನ್ನು ಹಂಚುವ ಮೊದಲು ಸಂಪತ್ತು ಸೃಷ್ಟಿಸಬೇಕು. ‘ಕಲ್ಯಾಣ’ ಎಂದರೆ ಬಡ ವರ್ಗಗಳ ಬಗ್ಗೆ ಕಾಳಜಿ ವಹಿಸುವುದು” ಎಂದು ಕಾಂಗ್ರೆಸ್ ಹೇಳಿದೆ.

- Advertisement -
spot_img

Latest News

error: Content is protected !!