ಮಂಗಳೂರು: ಮಂಗಳೂರಿನಲ್ಲಿ ಭಾರತೀಯ ರೆಡ್ ಕ್ರಾಸ್ ಸೊಸೈಟಿಯ ದಕ್ಷಿಣ ಕನ್ನಡ ಜಿಲ್ಲಾ ಶಾಖೆ ಶತಾಬ್ದಿ ಭವನ ಉದ್ಘಾಟನೆಗೊಂಡಿದೆ.ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಶತಾಬ್ದಿ ಭವನವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು.
ನಂತರ ಮಾತನಾಡಿದ ರಾಜ್ಯಪಾಲರು ಪ್ರಸ್ತುತ, ಭಾರತದಲ್ಲಿ ಹವಾಮಾನ ಬದಲಾವಣೆ, ನಗರ ಆರೋಗ್ಯ ಬಿಕ್ಕಟ್ಟು, ಮಾನಸಿಕ ಒತ್ತಡ ಮತ್ತು ಸಾಮಾಜಿಕ ಅಸಮಾನತೆಗಳಂತಹ ಸಮಸ್ಯೆಗಳು ವೇಗವಾಗಿ ಹೊರಹೊಮ್ಮುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ, ರೆಡ್ ಕ್ರಾಸ್ ಸಾಂಪ್ರದಾಯಿಕ ಸೇವೆಗಳಿಗೆ ಮಾತ್ರ ಸೀಮಿತವಾಗಿರದೇ, ನಾವೀನ್ಯತೆ, ಡಿಜಿಟಲ್ ವಿಧಾನಗಳು ಮತ್ತು ಸ್ಥಳೀಯ ಭಾಗವಹಿಸುವಿಕೆಯ ಮೂಲಕ ತನ್ನ ವ್ಯಾಪ್ತಿ ಮತ್ತು ಪ್ರಭಾವವನ್ನು ವಿಸ್ತರಿಸಬೇಕಾಗಿದೆ ಎಂದು ಹೇಳಿದರು.
ಸಮಾರಂಭದಲ್ಲಿ ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್, ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಶಾಸಕ ಡಿ. ವೇದವ್ಯಾಸ್ ಕಾಮತ್, ಐಆರ್‌ಸಿಎಸ್ ನ ಕರ್ನಾಟಕ ಶಾಖೆಯ ಉಪಾಧ್ಯಕ್ಷ ಭಾಸ್ಕರ್ ರಾವ್ ಉಪಸ್ಥಿತರಿದ್ದರು.


