Friday, July 17, 2026
Homeಕರಾವಳಿಉಡುಪಿಬೈಂದೂರು: ನಾನು ತಪ್ಪು ಮಾಡಿದ್ರೆ ಶಿಕ್ಷೆ ಅನುಭವಿಸಲು ಸಿದ್ಧ: ಯಾವ ತನಿಖೆ ಬೇಕಾದ್ರೂ ನಡೆಸಲಿ: ಡಿಕೆಶಿ...

ಬೈಂದೂರು: ನಾನು ತಪ್ಪು ಮಾಡಿದ್ರೆ ಶಿಕ್ಷೆ ಅನುಭವಿಸಲು ಸಿದ್ಧ: ಯಾವ ತನಿಖೆ ಬೇಕಾದ್ರೂ ನಡೆಸಲಿ: ಡಿಕೆಶಿ ಸವಾಲು

- Advertisement -
- Advertisement -

ಬೈಂದೂರು: ಕರ್ನಾಟಕ ರಾಜ್ಯದ ಇಂಧನ ಇಲಾಖೆ  ಜವಾಬ್ದಾರಿಯನ್ನು ನಾನು ತೆಗೆದುಕೊಂಡಾಗ ಮತ್ತು ನಾನು ಜವಾಬ್ದಾರಿ ಬಿಟ್ಟಾಗ ಏನಿತ್ತು ಎಂಬುದು ರಾಜ್ಯದ ಜನತೆಗೆ ಗೊತ್ತಿದೆ.ನಾನು ಯಾವುದೇ ತಪ್ಪು ಮಾಡಿದ್ರೂ ಆ ತಪ್ಪಿನ ಶಿಕ್ಷೆ ಅನುಭವಿಸಲು ಬದ್ದನಾಗಿದ್ದೇನೆ. ರಾಜ್ಯ ಸರಕಾರ ಯಾವ ತನಿಖೆ ಬೇಕಾದ್ರೂ ಮಾಡಲಿ ಎನು ಬೇಕಾದ್ರೂ ಮಾಡಲಿ. ಎಲ್ಲ ತನಿಖೆಗೆ ಸಿದ್ದನಾಗಿದ್ದೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.

ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಉಪ್ಪುಂದದಲ್ಲಿ ಕಾರ್ಯಕ್ರಮಕ್ಕೆ ಆಗಮಿಸಿದ ಅವರು ಮಾಧ್ಯಮದ ಪ್ರಶ್ನೆಗಳಿಗೆ ಉತ್ತರಿಸಿದರು. ವಿಶ್ವದ ಅತೀ ದೊಡ್ಡ ಸೋಲಾರ್ ಪಾರ್ಕ್ ನಿರ್ಮಾಣ ಮಾಡಿದ್ದೇನೆ.ಇದರಲ್ಲಿ ಶೇ 0.1 ರಷ್ಟು ಹೆಚ್ಚಿ ಕಮ್ಮಿ ಆಗಿದ್ದರೂ ಅದರ ಹೊಣೆ ಹೊತ್ತುಕೊಳ್ಳಲು ನಾನು ಬದ್ದನಾಗಿದ್ದೇನೆ.ಯಾವ ತನಿಖೆ ಬೇಕಿದ್ರೂ‌ ಮಾಡಲಿ ಎಂದು ಸವಾಲು ಹಾಕಿದ್ದಾರೆ.

- Advertisement -

Latest News

error: Content is protected !!