Saturday, June 6, 2026
Homeತಾಜಾ ಸುದ್ದಿ'ಬರಹ ಬ್ರಹ್ಮ'ನಿಗೆ ಅಂತಿಮ ವಿದಾಯ: ಪಂಚಭೂತಗಳಲ್ಲಿ ಲೀನವಾದ ರವಿಬೆಳಗೆರೆ

‘ಬರಹ ಬ್ರಹ್ಮ’ನಿಗೆ ಅಂತಿಮ ವಿದಾಯ: ಪಂಚಭೂತಗಳಲ್ಲಿ ಲೀನವಾದ ರವಿಬೆಳಗೆರೆ

- Advertisement -
- Advertisement -

ಬೆಂಗಳೂರು: ಹೃದಯಘಾತದಿಂದ ನಿನ್ನೆ(ಗುರುವಾರ) ತಡರಾತ್ರಿ ನಿಧನರಾದ ಹಾಯ್ ಬೆಂಗಳೂರು ಪತ್ರಿಕೆಯ ಸಂಪಾದಕ, ನಟ, ಕಿರುತೆರೆ ನಿರೂಪಕ ಬಹುಮುಖಪ್ರತಿಭೆಯೂ ಆಗಿದ್ದ ರವಿಬೆಳೆಗೆರೆ ಅವ್ರ ಅಂತಿಮ ವಿಧಿವಿಧಾನಗಳು ಬೆಂಗಳೂರಿನ ಬನಶಂಕರಿ ಚಿತಾಗಾರದಲ್ಲಿ ನೆರವೇರಿದ್ದು, ಈ ಮೂಲಕ ಬರಹ ಬ್ರಹ್ಮ ಪಂಚಭೂತಗಳಲ್ಲಿ ಲೀನಾರಾಗಿದ್ದಾರೆ.

ಹಿಂದೂ ಬ್ರಾಹ್ಮಣ ಸಂಪ್ರಾದಾಯದಂತೆ ರವಿ ಬೆಳಗೆರೆಯವ್ರು ಅಂತಿಮ ವಿಧಿ ವಿಧಾನವನ್ನ ಪುತ್ರ ಕರ್ಣ ಮತ್ತು ಹಿಮವಂತ ನೆರೆವೇರಿಸಿದ್ರು. ಸುಮಾರು ಒಂದು ಟನ್‌ ಸೌದೆಯಿಂದ ಸಿದ್ಧಪಡಿಸಲಾಗಿದ್ದ ಚಿತೆಗೆ ಪುತ್ರ ಕರ್ಣ ಮತ್ತು ಹಿಮವಂತ ಅಗ್ನಿ ಸ್ಪರ್ಶ ಮಾಡಿದರು.

ರವಿ ಬೆಳೆಗೆಯವರ ಅಭಿಮಾನಿಗಳು, ಅಪಾರ ಓದುಗ ಬಳಗ, ಸಾಹಿತಿಗಳು, ಚಲನಚಿತ್ರ ನಟನಟಿಯರು, ಕಿರುತೆರೆ ಕಲಾವಿದರು, ನಿರ್ದೇಶಕರು, ಪತ್ರಕರ್ತರು ಆಗಮಿಸಿ ರವಿ ಅವರ ಅಂತಿಮ ದರ್ಶನ ಪಡೆದರು.

ಇನ್ನು ರವಿ ಬೆಳಗೆರೆಯವರಿಗೆ ಇಬ್ಬರು ಪತ್ನಿಯರಿದ್ದು ನಾಲ್ವರು ಮಕ್ಕಳಿದ್ದಾರೆ. ಮೊದಲ ಪತ್ನಿ ಲಲಿತಾ ಅವರ ಮಕ್ಕಳಾದ ಕರ್ಣ, ಭಾವನ ಬೆಳಗೆರೆ, ಚೇತನ ಬೆಳಗೆರೆ ಮತ್ತು ಎರಡನೇ ಪತ್ನಿ ಯಶೋಮತಿ ಹಾಗೂ ಮಗ ಹೀಮವಂತ ಅವರನ್ನು ಅಗಲಿದ್ದಾರೆ. ಖ್ಯಾತ ಚಿತ್ರ ನಟ ಶ್ರೀನಗರ ಕಿಟ್ಟಿ ಅವರ ಎರಡನೇ ಮಗಳು ಭಾವನಾ ಬೆಳಗೆರೆ ಪತಿಯಾಗಿದ್ದಾರೆ.

- Advertisement -

Latest News

error: Content is protected !!